ಆಶಿತಾ ವೆಡ್ಸ್ ಶಕೀಲ್…. ಲವ್ ಜಿಹಾದ್ ಅಲ್ಲ
ನಮ್ಮದು 12 ವರ್ಷದ ಪ್ರೀತಿ.. ಅವನನ್ನು ಬಿಟ್ಟು ನನಗೆ ಇರೋಕೆ ಆಗಲ್ಲ. ಅದಕ್ಕೆ ತಂದೆ-ತಾಯಿಯನ್ನು ಕಾಡಿಬೇಡಿ ಮದುವೆಗೆ ಒಪ್ಪಿಸಿ ಮದುವೆ ಆಗುತ್ತೀದ್ದೇನೆ. ನಾವಿಬ್ರೂ ಬೇರೆ ಆಗೋ ಮಾತೇ ಇಲ್ಲ… ಇದು ನೊಂದ ಯುವತಿ ಆಶಿತಾ ಮಾತು
ಪ್ರೀತಿ ಪ್ರೇಮ ಮದುವೆ ವಿಚಾರದಲ್ಲಿ ಹುಡುಗನ ತಂದೆ ತಾಯಿಯೋ ಇಲ್ಲಾ ಹುಡುಗಿಯ ತಂದೆ ತಾಯಿಯೋ ವಿರೋಧ ವ್ಯಕ್ತ ಪಡಿಸೋದು ಸಾಮಾನ್ಯ. ಕೆಲವೊಮ್ಮೆ ಪರಸ್ಪರ ಹುಡುಗ ಹುಡುಗಿಯಿಂದಲೂ ವಿರೋಧ ವ್ಯಕ್ತವಾಗಬಹುದು ಆದ್ರೆ ಇಲ್ಲಿ ವಿರೋಧ ವ್ಯಕ್ತವಾಗಿರೋದು ಭಜರಂಗದಳದ ಕಡೆಯಿಂದ
ಮನೆಯವ್ರನ್ನೆಲ್ಲ ಒಪ್ಪಿಸಿ ಮದುವೆಗೆ ಸಿದ್ದವಾಗಿರೋ ಆಶಿತಾ ಮತ್ತು ಶಕೀಲ್ ಜೋಡಿಗೆ ಭಜರಂಗದಳ ಮಗ್ಗುಲ ಮುಳ್ಳಾಗಿದೆ. ಹೌದು… ಜಾತಿ ಧರ್ಮ ಎಲ್ಲವನ್ನು ಮೀರಿದ್ದು ಈ ಪ್ರೀತಿ. ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಅನ್ನೋ ಮಾತಿನಂತೆ ಈ ಜೋಡಿಯ ಪ್ರೀತಿ ಜಾತಿ ಧರ್ಮವನ್ನು ಮೀರಿದ್ದಾಗಿತ್ತು. ತಮ್ಮ ತಂದೆ ತಾಯಿಯನ್ನು ಕಷ್ಟಪಟ್ಟು ಒಪ್ಪಿಸಿ ಹುಡುಗನಿಗೂ ಧೈರ್ಯತುಂಬಿ ಮದುವೆಯ ಖುಷಿಯಲ್ಲಿದ್ದ ಆ ಹುಡುಗಿ ಮನ ತೇಲ್ತಾ ಇತ್ತು.
ಆಶಿತಾ ಹೇಳುವಂತೆ ನಮ್ಮ ತಂದೆ-ತಾಯಿಯನ್ನು ಒಪ್ಪಿಸಿ ಹುಡುಗನ ಮನೆಗೆ ನಾನೇ ಕರೆದುಕೊಂಡು ಹೋಗಿ ಆ ಹುಡುಗನ ತಂದೆ-ತಾಯಿಯನ್ನು ಒಪ್ಪಿಸಿದ್ದೇನೆ. ಅವನನ್ನು ಒಪ್ಪಿಸಲು ನಾವು ಎಷ್ಟು ಕಷ್ಟಪಟ್ಟಿದ್ದೀವಿ ಅನ್ನೋದನ್ನು ನಮ್ ಮೊಬೈಲ್‌ನ ಎಸ್‌ಎಂಎಸ್ ಮೆಸೇಜ್‌ಗಳಲ್ಲಿ ಇದೆ.
ಇನ್ನು ಈ ರೀತಿ ಸಮಸ್ಯೆಗಳು ಬರುತ್ತವೆ ಎಂದು ಆ ಹುಡುಗ ಮನೆಯವರು ಈ ಮೊದೆಲೇ ಹೇಳಿಕೊಂಡಿದ್ದರಂತೆ. ಅದೇನೆ ಬಂದರೂ ನಾವೇ ಎದುರಿಸುತ್ತೇವೆ ಎಂದು ಹುಡುಗಿ ಮನೆಯವರು ಹೇಳಿದ ಬಳಿಕವಷ್ಟೇ ಮದುವೆಗೆ ಒಪ್ಪಿದ್ದಾರಂತೆ. ಇನ್ನು ಭಜರಂಗದಳದ ಮೇಲೆ ಆಕ್ರೋಶ ವ್ಯಕ್ತಪಡಿಸೋ ಆಶಿತಾ ಈಗ ಪ್ರತಿಭಟಿಸುತ್ತಿರುವ ಒಬ್ಬರಾದರೂ ನಾನು ಮತ್ತೊಬ್ಬ ಹುಡುಗನೊಟ್ಟಿಗೆ ಮದುವೆಯಾದ ಮೇಲೆ ನನ್ನ ಆಸರೆಗೆ ಬರುತ್ತಾರೆ ಎನ್ನುವುದಕ್ಕೆ ಯಾವ ಗ್ಯಾರಂಟಿ? ಇವನನ್ನು ಬಿಟ್ಟು ಬದುಕಲಾರೆ ಎಂದು ಪಟ್ಟು ಹಿಡಿದಿದ್ದಾಳೆ.
ಅವನನ್ನು ಬಿಟ್ಟು ಮತ್ತಾರನ್ನೂ ಮದುವೆ ಆಗೋಲ್ಲ ಅನ್ನೋ ಆಶಿತಾ ಒಂದು ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋದ್ರೆ ಗಂಡನ ಮನೆ ಸಂಪ್ರದಾಯದಂತೆ ಇರುವುದು ಪದ್ಧತಿ ನಾನು ಹಾಗೆಯೇ ಇರುತ್ತೇನೆ ಹೊರತು ಮತಾಂತರದ ಪ್ರಶ್ನೆಯೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
- “ಶ್ರೀ”
POPULAR STORIES :
15 ಕೆ.ಜಿ.ತೂಕ ಇಳಿಸಿಕೊಂಡ ತುಪ್ಪದ ಬೆಡಗಿ..! Exclusive Photos Ragini Dwivedi
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!