ಪಣಜಿ : ಈ ಗ್ರಾಮದಲ್ಲಿ ಒಂದೇ ಒಂದು ಫೋಟೋಕ್ಕೆ 500 ರೂ ತೆರಿಗೆ ಕಟ್ಟಬೇಕು. ಇದು ಆಶ್ಚರ್ಯವೆನಿಸಿದರೂ ಸತ್ಯ.. ನಂಬಲೇ ಬೇಕಿದೆ, ಇದು ಗೋವಾದ ಪ್ರವಾಸಿಗರು, ಸ್ಥಳೀಯರು ಕೂಡ ಅನುಭವಿಸುತ್ತಿರೂ ತೆರಿಗೆ ಕಂಟಕ!
ಮಾಜಿ ಕೇಂದ್ರ ಸಚಿವ ದಿ ಮನೋಹರ್ ಪರಿಕ್ಕರವರ ಪೂರ್ವಜರ ಗ್ರಾಮವೆಂದೇ ಖ್ಯಾತವಾಗಿರುವ ಉತ್ತರ ಗೋವಾದ ಪರ್ರಾ ಗ್ರಾಮದಲ್ಲಿ ಸುಂದರವಾರ ಭೂದೃಶ್ಯ ಸೆರೆ ಹಿಡಿಯಲು ತೆರಿಗೆ ಕಟ್ಟಬೇಕು. ಸಚ್ಛತಾ ತೆರಿಗೆ, ಛಾಯಾಗ್ರಹಣ ತೆರಿಗೆ ಹೆಸರಲ್ಲಿ ಗ್ರಾಮ ಪಂಚಾಯತಿ ವಿಧಿಸುತ್ತಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ನಿವಾಸಿ ಪಾಲ್ ಫರ್ನಾಂಡಿಸ್ ಮಾತನಾಡಿ, ಕೆಲವು ಸಂಬಂಧಿಕರಿಗೆ 500 ರೂ ಶುಲ್ಕ ವಿಧಿಸಿದಾಗ ಹೊಸ ತೆರಿಗೆಯ ಬಗ್ಗೆ ತಿಳಿದುಬಂದಿದೆ. ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ರಾ ಪಂ ಮಾಜಿ ಸದಸ್ಯ ಬೆನೆಡಿಕ್ಟ್ ಡಿಸೋಜಾ ಮಾತನಾಡಿ, ಪಂಚಾಯಿತಿಯು ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಶುಲ್ಕ ವಿಧಿಸುವ ಹಕ್ಕಿದೆ. ಆದರೆ ವ್ಯಕ್ತಿಗಳಿಗೆ ಶುಲ್ಕ ವಿಧಿಸುವುದು ನ್ಯಾಯವಲ್ಲ ಎಂದಿದ್ದಾರೆ.
ಈ ಗ್ರಾಮದಲ್ಲಿ ಒಂದೇ ಒಂದು ಫೋಟೋಕ್ಕೆ ಕಟ್ಟಬೇಕು 500 ರೂ ತೆರಿಗೆ!
Date: