15 ಸಾವಿರ ಉದ್ಯೋಗ ಸೃಷ್ಠಿಸಿದ ಉಪನ್ಯಾಸಕ!

Date:

ಭಾರತದ ಅತೀ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ಕೊಟ್ಟು ಮತದಾರನ ಮನವೊಲಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅದ್ರಲ್ಲೂ ಉದ್ಯೋಗ ಕಲ್ಪಿಸಿಕೊಡೋದಕ್ಕೆ ಸರ್ಕಾರಗಳು ಕೂಡ ಶ್ರಮಿಸುತ್ತಿವೆ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗುತ್ತಿದೆ.
ನಾಗಾಲ್ಯಾಂಡ್ನಲ್ಲಿರುವ ಬ್ಯಾಪ್ಟಿಸ್ಟ್ ಕಾಲೇಜಿನ ಮಾಜಿ ಅರ್ಥಶಾಸ್ತ್ರ ಉಪನ್ಯಾಸಕರೊಬ್ಬರು 15 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅವರಿಗೆ ಜೀವನಕ್ಕೆ ದಾರಿಯಾಗಿದ್ದಾರೆ. ಹೌದು.. ನಿಚುಟೆ ಡೌಲೋ ಈಶಾನ್ಯ ರಾಜ್ಯಗಳ ನಿರುದ್ಯೋಗಿಗಳ ಪಾಲಿನ ಆಶಾಕಿರಣರಾಗಿದ್ದಾರೆ.


2000ನೇ ಇಸ್ವಿಯಲ್ಲಿ ನಿಚುಟೆ ಡೌಲೋ ಉಪನ್ಯಾಸಕ ವೃತ್ತಿ ತ್ಯಜಿಸಿದ್ರು. ನಿರೋದ್ಯೋಗಿಗಳಿಗಾಗಿಯೇ ಎಂಟರ್ಪ್ರೆನ್ಯೂರ್ಸ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಯುವಕರಿಗೆ ಉದ್ಯಮ ಆರಂಭಿಸಲು ಬಂಡವಾಳ ನೀಡುವುದು, ಉದ್ಯಮ ಕೌಶಲ್ಯವನ್ನು ಕಲಿಸಿಕೊಡುವುದು, ಚಿಕ್ಕಚಿಕ್ಕ ಉದ್ಯಮಗಳಿಗೆ ಮಾರ್ಕೆಟಿಂಗ್ ನೆಟ್ವರ್ಕ್ ಕಲ್ಪಿಸುವುದು ಈ ಸಂಸ್ಥೆಯ ಉದ್ದೇಶ.
1992ರಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಯುವಜನತೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ನಿಚುಟೆ ‘ಬೀಕೊನ್ ಆಫ್ ಹೋಪ್’ ಎಂಬ ಸಂಸ್ಥೆಯೊಂದನ್ನು ಆರಂಭಿಸಿದ್ರು. ಆದ್ರೆ ಅದು ಯಶಸ್ವಿಯಾಗಿರಲಿಲ್ಲ. ನಂತರ ಅವರು ಉಪನ್ಯಾಸಕ ವೃತ್ತಿ ಆರಂಭಿಸಿದ್ರು. 8 ವರ್ಷಗಳ ಕಾಲ ಬ್ಯಾಪ್ಟಿಸ್ಟ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿವುದು ಅನಿವಾರ್ಯವಾಗಿತ್ತು.
ಆದ್ರೆ ನಿರೋದ್ಯೋಗಿಗಳ ಸಮಸ್ಯೆ ಅರಿತಿದ್ದ ನಿಚುಟೆ ಡೌಲೋ ಅವ್ರು ಅವರಿಗಾಗಿ ಏನಾದ್ರು ಮಾಡಬೇಕೆಂಬ ತುಡಿತದಿಂದ ತಾವು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಇವರ ಬಳಿ ಹೆಚ್ಚು ಹಣವಿರಲಿಲ್ಲ. ಸ್ನೇಹಿತರು ಕೈ ಜೋಡಿ ಪ್ರತಿಯೊಬ್ಬರು 500 ರೂಪಾಯಿ ಹಣ ತೊಡಗಿಸಿದ್ರು. 7500 ರೂಪಾಯಿ ಬಂಡವಾಳದಿಂದ ಗ್ರೀಟಿಂಗ್ ಕಾರ್ಡ್ಸ್ , ಲೆದರ್ ಬೆಲ್ಟ್ ಮತ್ತು ಬ್ಯಾಗ್ಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ರು. ಇದರಿಂದ ಲಕ್ಷಾಂತರ ರೂಪಾಯಿ ಗಳಿಸಿ ಆ ಹಣದಿಂದ ಸಂಸ್ಥೆಯನ್ನು ತೆರೆದರು.


ಸಂಸ್ಥೆ ಈ ಆರಂಭದ ನಂತರ ಜನರಿಂದ ಹೂಡಿಕೆ ರೂಪದಲ್ಲಿ ಡೊನೇಶನ್ಗಳನ್ನು ಸಂಗ್ರಹಿಸಲಾರಂಭಿಸಿತ್ತು. ಈಗ ಯುವಜನತೆಗೆ ಸ್ವಂತ ಉದ್ಯಮ ಆರಂಭಿಸಲು ಶೇ.16ರಷ್ಟು ಬಡ್ಡಿದರದಲ್ಲಿ ಹಣಕಾಸು ನೆರವು ನೀಡುತ್ತಿದೆ. ಈಗಾಗ್ಲೇ 10,000ಕ್ಕೂ ಹೆಚ್ಚು ಮಂದಿ ಲೋನ್ ಪಡೆದುಕೊಂಡು ಸ್ವಾವಲಂಬಿಯಾಗಿ ಬಿಸಿನೆಸ್ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ನೇರ ಅಥವಾ ಪರೋಕ್ಷವಾಗಿ 15,000 ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಇವರು ಯಶಸ್ಸಿಯಾಗಿದ್ದಾರೆ. ನೇರ ಬೆಂಬಲ ಪಡೆದ 3500ಕ್ಕೂ ಹೆಚ್ಚು ರೈತರು ಕೃಷಿಯಲ್ಲಿ ಸಫಲರಾಗಿದ್ದು, ಅವರಿಗೆ ಜೀವನಾಧಾರವೂ ದೊರೆತಿದೆ. ಅರುಣಾಚಲ ಪ್ರದೇಶ ಮತ್ತು ಆಸ್ಸಾಂ ಸರ್ಕಾರಗಳು ತರಬೇತಿ ಮತ್ತು ಇತರ ಚಟುವಟಿಕೆಗಳ ಆರಂಭಕ್ಕಾಗಿ ಎಂಟರ್ಪ್ರೆನ್ಯೂರ್ಸ್ ಅಸೋಸಿಯೇಟ್ಸ್ ಮೊರೆ ಹೋಗಿವೆ.
ಇವರ ಈ ಕಾರ್ಯಕ್ಕೆ ‘2016ರ ವರ್ಷದ ಸಾಮಾಜಿಕ ವಾಣಿಜ್ಯೋದ್ಯಮಿ’ ಪ್ರಶಸ್ತಿಯುನ್ನು Schwab Foundation ನೀಡಿ ಗೌರವಿಸಿದೆ.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...