ಇಡಿ ಅಧಿಕಾರಿಗಳು ಡಿಕೆಶಿ ಅವರ ಆಸ್ತಿ ವಿಚಾರಣೆ ಮಾಡಿ ತಿಹಾರ್ ಜೈಲಿಗೆ ಕೂಡ ಕಳಿಸಿದ್ದರು ಇದೀಗ ಮತ್ತೊಬ್ಬ ಕಾಂಗ್ರೆಸ್ನವರಾದ ಜಾರ್ಜ್ಅವರ ಮೇಲೆ ಇಡಿ ಕಣ್ಣು ಬಿದ್ದಿದೆ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾದ ಕೆ.ಜೆ. ಜಾರ್ಜ್ ಅವರಿಗೆ ಸದ್ಯ ಇಡಿ ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾರೆಡ್ಡಿ, ಕೆ.ಜೆ. ಜಾರ್ಜ್ ವಿರುದ್ಧ ಆರೋಪ ಮಾಡಿದ್ದರು.
ಕೆ.ಜೆ. ಜಾರ್ಜ್ ನ್ಯೂಯಾರ್ಕ್‌ನಲ್ಲಿ ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಫೆಮಾ ಆಕ್ಟ್ ನಲ್ಲಿ ಈ ದೂರಿನನಯ್ವಯ ಕೇಸ್ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಇದೀಗ ತನಿಖೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.