ಇತ್ತೀಚೆಗಷ್ಟೇ ಹೊಸದಾಗಿ ಆರಂಭವಾಗಿದ್ದ ದಾದಾ ಸಾಹೇಬ್ ಸೌತ್ ಪ್ರಶಸ್ತಿಯನ್ನು ಯಶ್ ಅವರು ಪಡೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಾದ ಬೆನ್ನಲ್ಲೇ ಇದೀಗ ಯಶ್ ಅವರಿಗೆ ಮತ್ತೊಂದು ನ್ಯಾಷನಲ್ ರೇಂಜಿನ ಪ್ರಶಸ್ತಿ ದಕ್ಕಿದೆ. ಹೌದು ಜಿಕ್ಯೂ ಇಂಡಿಯಾ ನೀಡುವ ಅತ್ಯಂತ ಪ್ರಭಾವಶಾಲಿ ಭಾರತೀಯ ಪ್ರಶಸ್ತಿಗೆ ಯಶ್ ಅವರು ಭಾಜನರಾಗಿದ್ದಾರೆ. ಜಿಕ್ಯೂ ಇಂಡಿಯಾ ಕಂಪನಿ ಭಾರತದ ಒಟ್ಟು ಐವತ್ತು ಮಂದಿಯನ್ನು ಪಟ್ಟಿ ಮಾಡಿ ಅತ್ಯಂತ ಪ್ರಭಾವಶಾಲಿ ಭಾರತೀಯರು ಎಂದು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತದೆ.
ಇನ್ನು ಭಾರತದಾದ್ಯಂತ ಆಯ್ಕೆಯಾಗಿರುವ ಒಟ್ಟು ಐವತ್ತು ಸೆಲೆಬ್ರಿಟಿಗಳ ಪೈಕಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಸಹ ಒಬ್ಬರು. ಮಹಾ ಸಾಧನೆ ಮಾಡಿರುವ ಸಾಧಕರ ಜೊತೆ ಈ ಪ್ರಶಸ್ತಿಯನ್ನು ಪಡೆದದ್ದು ತುಂಬಾ ಹೆಮ್ಮೆಯ ವಿಷಯ ಎಂದು ಯಶ್ ಅವರು ಹೇಳಿಕೊಂಡಿದ್ದಾರೆ. ಇನ್ನು ಕನ್ನಡದ ನಟ ಈ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಪ್ರಶಸ್ತಿ ಮೇಲೆ ಪ್ರಶಸ್ತಿ ಗಳಿಸುತ್ತಿರುವುದು ಕನ್ನಡಿಗರಿಗೆ ನಿಜವಾಗಿಯೂ ಹೆಮ್ಮೆಯ ವಿಷಯವೇ ಸರಿ.