ಈ ಹಿನ್ನಲೆಯಲ್ಲಿ ಅನರ್ಹ ಶಾಸಕರುಗಳಾದ ಮುನಿರತ್ನ, ಎಸ್.ಟಿ. ಸೋಮಶೇಖರ್ ಮೊದಲಾದವರು ಇಂದು ದೆಹಲಿಗೆ ದೌಡಾಯಿಸಿದ್ದು, ತೀರ್ಪು ಹೊರ ಬಂದ ಬಳಿಕ ಮಾತನಾಡಿದ ಶಾಸಕರುಗಳು ನಾಳೆ ಬಿಜೆಪಿ ಕಚೇರಿಗೆ ಬರುತ್ತೆವೆ ಎಲ್ಲಾ ಅಲ್ಲೆ ಬಂದು ಸೇರುತ್ತೆವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿರುವ ಬಹುತೇಕ ಎಲ್ಲ ಅನರ್ಹ ಶಾಸಕರುಗಳು ನಾಳೆ ಬಿಜೆಪಿಗೆ ಬಂದು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ ನಂತರ ರಾಜಕೀಯ ವಲಯದಲ್ಲಿ ಏನೇನು ಬದಲಾವಣೆ ಆಗಬಹುದು ಎಂದು ನಾಳೆ ಬಿಜೆಪಿ ಕಚೇರಿಗೆ ಬಂದ ಅನರ್ಹ ಶಾಸಕರ ನಿರ್ಣಯ ತಿಳಿಸುತ್ತದೆ ನಂತರ ಯಾರಿಗೆ ಯಾವ ಸ್ಥಾನಮಾನಗಳು ಸಿಗಲಿದೆ ನೊಡಬೇಕಿದೆ.