ರಚಿತಾ ರಾಮ್ ಸದ್ಯ ಕನ್ನಡ ಚಲನ ಚಿತ್ರರಂಗದ ನಂಬರ್ ಒನ್ ನಟಿ ಅಂತ ಹೇಳಿದರೆ ತಪ್ಪಾಗಲಾರದು. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ರಚಿತಾ ರಾಮ್ ಅವರು ಕಿರುತೆರೆಯಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದು ಫುಲ್ ಬ್ಯುಸಿ ಇದ್ದಾರೆ. ಇನ್ನು ಇಷ್ಟೆಲ್ಲ ಬ್ಯುಸಿ ಇರುವ ರಚಿತಾ ರಾಮ್ ಅವರಿಗೆ ವಿವಾಹ ಅಂತ ಅಂದುಕೊಂಡರೆ ನಿಮ್ಮ ತಪ್ಪು ಏಕೆಂದರೆ ವಿವಾಹ ಆಗುತ್ತಿರುವುದು ರಚಿತಾರಾಮ್ ಅವರಲ್ಲ ಬದಲಾಗಿ ಅವರ ಅಕ್ಕ ನಿತ್ಯಾ ರಾಮ್. ಹೌದು ನಿತ್ಯಾರಾಮ್ ಅವರಿಗೆ ಕಂಕಣ ಬಲ ಕೂಡಿ ಬಂದಿದ್ದು ಮುಂದಿನ ಡಿಸೆಂಬರ್ 5 & 6 ನೇ ತಾರೀಖಿನಂದು ವಿವಾಹ ನಡೆ
ಹೌದು ಆಸ್ಟ್ರೇಲಿಯಾ ಮೂಲದ ಉದ್ಯಮಿ ಒಬ್ಬನ ಜೊತೆ ನಿತ್ಯಾರಾಮ್ ಅವರ ವಿವಾಹ ನಡೆಯಲಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಗಾಢವಾಗಿ ಹರಿದಾಡುತ್ತಿದೆ. ಸದ್ಯ ಕಿರುತೆರೆಯ ನಂದಿನಿ ಧಾರಾವಾಹಿಯಲ್ಲಿ ಬ್ಯುಸಿ ಇರುವ ನಿತ್ಯಾ ರಾಮ್ ಅವರು ಧಾರಾವಾಹಿಯ ಮುಖಾಂತರ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಮದುವೆ ದಿನಾಂಕ ಹೊರತುಪಡಿಸಿ ಮತ್ಯಾವ ವಿಷಯವೂ ಸಹ ಈ ಕುರಿತಾಗಿ ತಿಳಿದುಬಂದಿಲ್ಲ. ಈ ಕುರಿತು ನಿತ್ಯಾ ರಾಮ್ ಅವರ ಕುಟುಂಬದವರೇ ವಿಷಯವನ್ನು ತಿಳಿಸುತ್ತಾರಾ ಕಾದುನೋಡಬೇಕು.