ಕಿತ್ತಳೆ ಮಂಡಿ ಟಾಸ್ಕ್ ಅನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೀಡಲಾಗಿದೆ. ಹೀಗಾಗಿ ಎರಡೂ ತಂಡಗಳು ಸಹ ಕಿತ್ತಳೆ ಮಂಡಿ ಟಾಸ್ಕ್ನಲ್ಲಿ ಪಾಲ್ಗೊಂಡಿದ್ದು ಎರಡೂ ತಂಡಗಳ ನಡುವೆ ಪೈಪೋಟಿ ಭರ್ಜರಿಯಾಗಿದೆ. ಈ ಟಾಸ್ಕ್ ವೇಳೆ ಬಿಗ್ಬಾಸ್ ಮನೆಯೊಳಗೆ ದೊಡ್ಡದೊಂದು ವಿವಾದ ನಡೆದಿದ್ದು ಜಗಳ ತಾರಕಕ್ಕೇರಿದೆ. ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಎಂದ ಮೇಲೆ ಪರಸ್ಪರ ಕೂಗಾಡುವುದು ಕಾಮನ್ ಆದರೆ ಈ ಬಾರಿ ಹುಡುಗಿಯರ ಖಾಸಗಿ ಸ್ಥಳವನ್ನು ಮುಟ್ಟಬೇಡಿ ಎಂಬ ಕೂಗು ಬಿಗ್ ಬಾಸ್ ಮನೆಯಲ್ಲಿ ಕೇಳಿಬಂದಿದೆ. ಹೌದು ಕಿತ್ತಲೆ ಮಂಡಿ ಟಾಸ್ಕ್ನಲ್ಲಿ ಕಿತ್ತಳೆಯನ್ನು ದೀಪಿಕಾ ದಾಸ್ ಅವರು ತಮ್ಮ ಟಿ ಶರ್ಟ್ ಒಳಗಡೆ ಹಾಕಿಕೊಂಡು ತದನಂತರ ಆಟವನ್ನು ಆಡಲು ಮುಂದಾದರು.
ಹೀಗಾಗಿ ಕಿತ್ತಳೆ ಹಣ್ಣನ್ನು ಕಿತ್ತುಕೊಳ್ಳಲು ಎದುರಾಳಿ ಟೀಮ್ನ ಸದಸ್ಯರು ಯತ್ನಿಸಿದಾಗ ಕೋಪಗೊಂಡ ದೀಪಿಕಾ ದಾಸ್ ಅವರು ಟಾಸ್ಕ್ ನೆಪ ಮಾಡಿಕೊಂಡು ಗುಪ್ತಾಂಗವನ್ನು ಮುಟ್ಟಬೇಡಿ ಎಂದು ಕಿಡಿಕಾರಿದರು. ಇನ್ನು ಇದನ್ನು ಗಮನಿಸಿದ ವೀಕ್ಷಕರು ದೀಪಿಕಾ ದಾಸ್ ಅವರ ನಡೆ ಬಗ್ಗೆ ಪ್ರಶ್ನೆಯನ್ನು ಮಾಡುತ್ತಿದ್ದು ತಾವೇ ಬಟ್ಟೆ ಒಳಗೆ ಹಣ್ಣನ್ನು ಹಾಕಿಕೊಂಡು ತದನಂತರ ತಾವೇ ಮುಟ್ಟಬೇಡಿ ಎಂದು ಕಿರುಚಾಡುವುದು ಏಕೆ ಎಂದು ದೀಪಿಕಾ ದಾಸ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಬಿಗ್ ಬಾಸ್ ನೀಡಿರುವ ಟಾಸ್ಕನ್ನು ನ್ಯಾಯಯುತವಾಗಿ ಆಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ತಾವೇ ಹಣ್ಣನ್ನು ಬಟ್ಟೆಯೊಳಗೆ ಹಾಕಿಕೊಂಡು ಅಲ್ಲಿ ಮುಟ್ಟಬೇಡಿ ಇಲ್ಲಿ ಮುಟ್ಟಬೇಡಿ ಎಂದು ಕಿರುಚುವುದು ಸರಿಯಲ್ಲ ಎಂದು ಪ್ರೇಕ್ಷಕ ಪಡೆ ಹೇಳುತ್ತಿದೆ.