ಸ್ಯಾಂಡಲ್ ವುಡ್ ಕಿಂಗ್ ಸೆಂಚುರಿ ಸ್ಟಾರ್ ಎಂದೇ ಕರೆಯಲ್ಪಡುವ ಶಿವಣ್ಣ ಅವರಿಗೆ ಏನಾಯ್ತು? ಮನೆ ಕೆಲಸ ಮಾಡುವಂತಹ ಪರಿಸ್ಥಿತಿ ಅವರಿಗೇಕೆ ಬಂತು ಎಂದುಕೊಳ್ಳುತ್ತಿದ್ದೀರಾ? ಹೌದು ಶಿವಣ್ಣ ಅವರು ಮಾಡಿದ ಒಂದು ತಪ್ಪನ್ನು ಸರಿಪಡಿಸಲು ಮನೆ ಕೆಲಸಗಾರನಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರ. ಆದರೆ ಶಿವಣ್ಣ ಅವರು ಕೆಲಸಕ್ಕೆ ಸೇರಿಕೊಂಡಿರುವುದು ನಿಜ ಜೀವನದಲ್ಲಿ ಅಲ್ಲ ಬದಲಾಗಿ ಆಯುಷ್ಮಾನ್ ಭವ ಚಿತ್ರದಲ್ಲಿ. ಹೌದು ಶಿವಣ್ಣ ಮತ್ತು ಪಿ ವಾಸು ಕಾಂಬಿನೇಶನ್ ನಲ್ಲಿ ಈ ಹಿಂದೆ ಶಿವಲಿಂಗ ದಂತಹ ಸೂಪರ್ ಹಿಟ್ ಚಿತ್ರ ಬಂದಿತ್ತು ಅದೇ ಕಾಂಬಿನೇಷನ್ನ ಚಿತ್ರ ಆಯುಷ್ಮಾನ್ ಭವ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಶಿವಣ್ಣ ಅವರಿಂದ ನಡೆದ ಒಂದು ಘಟನೆಯಲ್ಲಿ ಅವರಿಗೆ ಅರಿವಿಲ್ಲದಂತೆಯೇ ಇತರರಿಗೆ ಕಷ್ಟವೆಂದು ಎದುರಾಗುತ್ತದೆ. ತಮ್ಮಿಂದ ಇನ್ನೊಬ್ಬರ ಬಾಳು ಹಾಳಾಯಿತೆಂದು ನೋವಿನಿಂದ ಶಿವಣ್ಣ ಆ ವ್ಯಕ್ತಿಗಳಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ತಮ್ಮಿಂದ ಆದ ತಪ್ಪನ್ನು ತಾವೇ ಸರಿ ಮಾಡಲು ಅವರಿಗೆ ಅರಿವಿಲ್ಲದಂತೆ ವೇಷ ಮರೆಸಿ ಕೆಲಸಗಾರನಾಗಿ ಸೇರಿಕೊಳ್ಳುತ್ತಾರೆ. ಈ ಚಿತ್ರ ಶಿವಲಿಂಗ ರೀತಿ ಥ್ರಿಲ್ ನೀಡದಿದ್ದರೂ ಸಹ ಒಂದೊಳ್ಳೆ ಮನರಂಜನೆ ಪಡೆದುಕೊಳ್ಳಲು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ನಿರೀಕ್ಷೆಗೆ ಮೋಸ ಮಾಡುವುದಿಲ್ಲ. ಮನೋ ಕಾಯಿಲೆಯ ರೋಗಿ ಪಾತ್ರದಲ್ಲಿ ರಚಿತಾ ಅವರು ಎಲ್ಲರ ಗಮನವನ್ನು ಸೆಳೆಯುತ್ತಾರೆ , ಇದೊಂದು ಫ್ಯಾಮಿಲಿ ಡಿನ್ನರ್ ಆಗಿರುವುದರಿಂದ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ರಮೇಶ್ ಭಟ್ , ಅನಂತ್ ನಾಗ್ , ಅವಿನಾಶ್ , ಸಾಧು ಕೋಕಿಲಾ ರಂಗಾಯಣ ರಘು ಮುಂತಾದ ಹಲವಾರು ಕಲಾವಿದರ ಬಳಗವೇ ಇಲ್ಲಿದೆ. ಒಟ್ಟಾರೆಯಾಗಿ ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ನೋಡಲು ಬಯಸುವವರು ಕುಟುಂಬ ಸಮೇತರಾಗಿ ಈ ಚಿತ್ರವನ್ನು ವೀಕ್ಷಿಸಬಹುದು.