ಕ್ರಿಕೆಟನ್ನು ಜಂಟಲ್ ಮ್ಯಾನ್ ಆಟ ಎಂದು ಕರೆಯುತ್ತಾರೆ. ಕ್ರಿಕೆಟ್ ಜಗತ್ತು ಲೆಕ್ಕವಿಲ್ಲದಷ್ಟು ಸಭ್ಯ, ಶ್ರೇಷ್ಠ ಆಟಗಾರರನ್ನು ಕಂಡಿದೆ. ದೇಶಕ್ಕಾಗಿ, ರಾಜ್ಯಕ್ಕಾಗಿ ಆಡುವ ಕ್ರಿಕೆಟಿಗರ ನಡುವೆ ದುಡ್ಡಿಗಾಗಿ ಮಾರಿಕೊಳ್ಳುವ ಕೆಟ್ಟ ಹುಳಗಳೂ ಇದ್ದಾರೆ. IPL, ,KPL ನಂಥಾ ಪ್ರತಿಷ್ಠಿತ ಲೀಗ್ ಟೂರ್ನಿಗಳಲ್ಲಿ ಮಿಂಚಿರುವ ಸ್ಟಾರ್ ಗಳು ಈ ಕಳ್ಳಾಟಕ್ಕೆ ಬಲಿಯಾಗುತ್ತಿದ್ದಾರೆ. ದುಡ್ಡಿನ ಹಿಂದೆ ಬಿದ್ದು, ಸಾಧನೆಯನ್ನು , ವೃತ್ತಿ ಧರ್ಮವನ್ನು ಮರೆಯುತ್ತಿದ್ದಾರೆ.
KPL ಮ್ಯಾಚ್ ಫಿಕ್ಸಿಂಗ್ ಇತ್ತೀಚೆಗಿನ ಟಾಪ್ ಅಂಡ್ ಹಾಟ್ ಟಾಪಿಕ್.
ಹಿಂದಿನ ಸೋಮವಾರ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಹರ್ಯಾಣ ಮೂಲದ ಪಿ ಸಯ್ಯಮ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬವೇಶ್ ಬಪ್ನಾ ನೆರವಿನಿಂದ ಸಯ್ಯಮ್ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಹೀಗಾಗಿ ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ವೆಸ್ಟ್ ಇಂಡೀಸ್‍ನಲ್ಲಿ ಬಂಧನ ಮಾಡಿದ್ದರು. ಹೀಗೆ ಕೆಪಿಎಲ್ ಫಿಕ್ಸಿಂಗ್ ವಿಚಾರದಲ್ಲಿ ಸಾಕಷ್ಟು ಡೆವಲಪ್ಮೆಂಟ್ ಗಳು ನಡೆಯುತ್ತಿವೆ. ಈಗೊಂದು ಬೆಚ್ಚಿ ಬೀಳಿಸುವ ಅಸಹ್ಯಕರ ಅಪ್ ಡೇಟ್ ಬಂದಿದೆ.
ಅದೇ ಕೆಪಿಎಲ್ ಫಿಕ್ಸಿಂಗ್ ಸುರ ಸುಂದರಿಯರ ಸೆರಗಲ್ಲಿ ಅಡಗಿತ್ತು ಎನ್ನುವುದು.
ಹೌದು, ಬ್ಯಾಟ್ಸ್ ಮನ್ ,ಬೌಲರ್ ಗಳನ್ನು ಫಿಕ್ಸ್ ಮಾಡಲು ಚಿಯರ್ ಗರ್ಲ್ಸ್ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸುಂದರಿಯರ ಸೆರಗಲ್ಲಿ ಬೆಚ್ಚಗಿರುತ್ತಿದ್ದವರು ಫಿಕ್ಸಿಂಗ್ ಮಾಡುತ್ತಿದ್ದರು ಎನ್ನಲಾಗಿದ್ದು, ಸಿಸಿಬಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸುರ ಸುಂದರಿಯರ ಸೆರಗಲ್ಲಿತ್ತಾ KPL ಫಿಕ್ಸಿಂಗ್ ???? ಲಲನೆಯರಿಗಾಗಿ ವೃತ್ತಿ ಧರ್ಮ ಬಿಟ್ಟರೇ?
Date: