ಹೌದು, ರಾಜ್ಯದಲ್ಲೀಗ ಉಪ ಚುನಾವಣೆಯ ಕಾವು…! ಪ್ರಜಾಪ್ರಭುತ್ವದ ಹಬ್ಬ ಚುನಾವಣೆ. ಆದರೆ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರವನ್ನು 5 ವರ್ಷ ನೆಟ್ಟಗೆ ಆಳಲು ಬಿಡದೆ ಜನಾದೇಶವನ್ನು ದಿಕ್ಕರಿಸಿ 17 ಮಂದಿ ಶಾಸಕರು ರಾಜೀನಾಮೆ ನೀಡಿದರು.
ಪರಿಣಾಮ ಅಳಿದುಳಿದ ಸಂಖ್ಯಾ ಬಲದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಂದು-ಒಂದುವರೆ ವರ್ಷ ಕಷ್ಟನೋ -ಸುಖನೋ ಒಟ್ನಲ್ಲಿ ಆಡಳಿತ ನಡೆಸಿದ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 17 ಮಂದಿಯ ರಾಜೀನಾಮೆ ದೆಸೆಯಿಂದ ಪತನವಾಯಿತು. ಜನ ಕೊಟ್ಟ ಅವಕಾಶ ಬಳಸಿಕೊಳ್ಳದೆ ಅನರ್ಹರೆಂಬ ಹಣೆಪಟ್ಟಿ ಕಟ್ಟಿಕೊಂಡವರಿಂದಾಗಿ ಇಂದು ಬೈ ಎಲೆಕ್ಷನ್ ನಡೀತಾ ಇದೆ. ಮತ್ತೆ ಜನ ತಪ್ಪು ಮಾಡದೆ ಅರ್ಹರನ್ನು ಆಯ್ಕೆ ಮಾಡುವ ಕಾಲ ಸನ್ನಿಹಿತವಾಗಿದೆ.
ಅದೇನೇ ಇರಲಿ 17 ಅನರ್ಹ ಶಾಸಕರಿಂದ ತೆರವಾದ ಕ್ಷೇತ್ರಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕೆ ಆರ್ ಪುರ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನಾದೇಶ ಪಡೆದಿದ್ದ ಬೈರತಿ ಬಸವರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಪತನಕ್ಕೆ ಕೈ ಜೋಡಿಸುವ ಮೂಲಕ, ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದಲ್ಲದೆ ಉಪ ಚುನಾವಣೆಗೆ ಕಾರಣವಾಗಿ ತಮ್ಮ
ಮತದಾರರ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಿದ್ದಾರೆ.
ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ …ಅದೂ ‘ಅನರ್ಹ’ ಎಂಬ ಹಣೆಪಟ್ಟಿಯೊಂದಿಗೆ.
ಕಾಂಗ್ರೆಸ್ ಬೈರತಿಗೆ ಸೆಡ್ಡು ಹೊಡೆಯಲು ಎಂ ನಾರಾಯಣಸ್ವಾಮಿಯವರನ್ನು ಕಣಕ್ಕಿಳಿಸಿದೆ. ಎಂಎಲ್ ಸಿ ನಾರಾಯಣಸ್ವಾಮಿ ಬೈರತಿ ಅಡ್ಡವಾಗಿದ್ದ ಕೆಆರ್ ಪುರಂನಿಂದ ಗೆದ್ದು ಜನಾದೇಶದೊಂದಿಗೆ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದ ಇಂದು ನಾರಾಯಣಸ್ವಾಮಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಪಾರ ಅಭಿಮಾನಿ ಬಳಗ ಸೇರಿತ್ತು. ಸ್ಥಳೀಯ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಸದಸ್ಯರು ಪಾಲ್ಗೊಂಡಿದ್ದರು.
ಈ ಬಗ್ಗೆ ಮಾತಾಡಿರೋ ನಾರಾಯಣಸ್ವಾಮಿ… ಇದೊಂದು ಅದ್ಭುತ ಮಾತ್ರವಲ್ಲ ಅತ್ಯಾದ್ಭುತ ದಿನ ಎಂದು ಬಣ್ಣಿಸಿದ್ದಾರೆ. ಹಾಗೆಯೇ ತನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಬಾರಿ ಅನರ್ಹರು ಬೇಡ ಅರ್ಹರೇ ಬೇಕು ಅಂತಿದ್ದೀರೆ ಜನ! ಹಾಗಾಗಿ ನಾರಾಯಣಸ್ವಾಮಿ ಗೆಲುವುನಿಶ್ಚಿತ ಎಂದು ಹೇಳಲಾಗುತ್ತಿದೆ.