ತಮಿಳುನಾಡಿನಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು ರಾಜಕೀಯ ಪ್ರವೇಶ ಮಾಡಿದ್ದರೂ ಅವರು ಸ್ನೇಹಿತರು ಕೂಡ ಹೌದು ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಪಡೆದುಕೊಂಡಿದ್ದರು ಅದರಲ್ಲಿ ಮಕ್ಕಳ್ ನೀಧಿ ಮಯ್ಯಂ (ಎಂಎನ್‍ಎಂ) ಪಕ್ಷದ ಸಂಸ್ಥಾಪಕ ಕಮಲ್‍ಹಾಸನ್ ಚೆನ್ನೈನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಜನೀಕಾಂತ್ ಜೊತೆ ಮೈತ್ರಿ ಹೇಳಿಕೆಗೆ ಇಂದು ಇನ್ನಷ್ಟು ಸ್ಪಷ್ಟ ಅರ್ಥ ನೀಡಿದ್ದಾರೆ. ಅಗತ್ಯವಿದ್ದರೆ ಮಾತ್ರ ರಜನೀಕಾಂತ್ ಅವರೊಂದಿಗೆ ರಾಜಕೀಯವಾಗಿ ಕೈ ಜೋಡಿಸಿ ತಮಿಳುನಾಡು ಹಿತರಕ್ಷಣೆಗೆ ಬದ್ಧವಾಗಿರುವುದಾಗಿ ಕಮಲ್‍ಹಾಸನ್ ತಿಳಿಸಿದ್ದಾರೆ.
ರಜನೀಕಾಂತ್ ನನ್ನ ಆಪ್ತಮಿತ್ರ. ನಾವಿಬ್ಬರೂ ಸಮಾನ ಮನಸ್ಕರು ಪರಸ್ಪರ ಕೈ ಜೋಡಿಸುವುದು ತಮಿಳುನಾಡು ಮತ್ತು ತಮಿಳು ಜನತೆಯ ಹಿತದೃಷ್ಟಿಯಿಂದ ಅತ್ಯಂತ ಪೂರಕವಾದುದು. ಆದರೆ ಅದರ ಅಗತ್ಯವಿದ್ದರೆ ನಾವು ಆ ನಿರ್ಧಾರವನ್ನು ಕೈಗೊಳ್ಳುತ್ತೇವೆ ಅಲ್ಲಿಯವರೆಗೂ ಯಾವುದೇ ಆ ರೀತಿ ನಿರ್ಧಾರಗಳು ತೆಗೆದುಕೊಳ್ಳುವುದಿಲ್ಲ ಎಂದು ಕಮಲ್ ಹಾಸನ್ ಅವರು ಹೇಳಿದರು .