ಬಿಜೆಪಿಗೆ ಜನರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. 15 ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಪ್ರತಿಪಕ್ಷಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು. ಈ ಮಾತಿನಿಂದ ಬಿಜೆಪಿ ಯಾವ ತಂತ್ರವನ್ನು ಮಾಡಲಿದೆ ಎಂದು ಯಾರಿಗು ತಿಳದು ಬಂದಿಲ್ಲ .

ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿರುವ ಸಿದ್ದರಾಮಯ್ಯ ಏನೇ ಅಬ್ಬರಿಸಿ ಬೊಬ್ಬೆ ಹೊಡೆದರೂ ಮತದಾರರು ತಲೆ ಕೆಡಿಸಿಕೊಳ್ಳುವುದಿಲ್ಲ. ಉಪಚುನಾವಣೆ ನಂತರ ಸಿದ್ದರಾಮಯ್ಯ ಒಂಟಿಯಾಗುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಎಚ್ಚರಿಸಿದರು. ಕಾಂಗ್ರೆಸ್ ಅವರನ್ನು ದೂರ ಇಡುತ್ತದೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರಿಗೆ ಸ್ಥಾನಮಾನವಿಲ್ಲ ಅವರು ಒಂಟಿಯಾಗಲಿದ್ದಾರೆ ಎಂದರು.






