ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 12ಕ್ಕೆ ದರ್ಶನ್ ಒಡೆಯನ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.ಬಳಿಕ ರಾಬರ್ಟ್ ಅಬ್ಬರ ಶುರುವಾಗಲಿದೆ. ಒಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ದಚ್ಚು ಬ್ಯುಸಿ ಇದ್ದಾರೆ. ಅದೇರೀತಿ ದರ್ಶನ್ ಅವರ ಬರಲಿರುವ ಸಿನಿಮಾಗಳಲ್ಲಿ ಗಂಡುಗಲಿ ಮದಕರಿ ನಾಯಕ ಸಿನಿಮಾ ಕೂಡ ಒಂದು. ಈಗಾಗಲೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಬಿಗ್ ಬಜೆಟ್ ಮೂವಿ ಗಂಡುಗಲಿ ಮದಕರಿನಾಯಕಿನಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈಗ ಈ ಗಂಡುಗಲಿ ಸಿನಿಮಾದ ನಾಯಕಿ ಬಗ್ಗೆ ಚರ್ಚೆ ಆಗುತ್ತಿದೆ. ಬಹುಕಾಲದಿಂದ ಸಿನಿಮಾರಂಗದಿಂದ ದೂರ ಉಳಿದಿರುವ ಮೋಹಕ ತಾರೆ ರಮ್ಯಾ ಗಂಡುಗಲಿ ಮದಕರಿ ನಾಯಕನಿಗೆ ಜೋಡಿ ಆಗುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ರಮ್ಯಾ ಕಮ್ ಬ್ಯಾಕ್ ಆಗುವುದಲ್ಲದೆ ದರ್ಶನ್ ಜೊತೆ 12 ವರ್ಷದ ಬಳಿಕ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. 2006ರಲ್ಲಿ ತೆರೆಕಂಡ ದತ್ತ ಸಿನಿಮಾದಲ್ಲಿ ದಚ್ಚು ಮತ್ತು ರಮ್ಯಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ಬಳಿಕ ಅರಸು, ಜೊತೆ ಜೊತೆಯಲು ಮತ್ತು ನಾಗರಹಾವು ಸಿನಿಮಾಗಳಲ್ಲಿ ಇಬ್ಬರು ದರ್ಶನ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ರು. ಈಗ ದರ್ಶನ್ ಮತ್ತು ರಮ್ಯಾ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.