ಮೀಸಲಾತಿಗಾಗಿ ಜಾಟ್ ಸಮುದಾಯದವರು ಹರ್ಯಾಣದಲ್ಲಿ ನಡೆಸುತ್ತಿದ್ದ ಚಳವಳಿ ಹಿಂಸಾರೂಪ ಪಡೆದುಕೊಂಡು, ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಯಲ್ಲಿ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದರು. ಕಡೆಗೆ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸುವ ಭರವಸೆಯ ಮಾತಾಡಿತ್ತು. ಆಮೇಲೆ ಜಾಟರ ಗುಂಪಿನಲ್ಲಿದ್ದ ನಲವತ್ತು ಮಂದಿ ಪುಂಡರು ಹತ್ತು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಸ್ಫೋಟಕ ವಿಷಯ ಹೊರಬಿದ್ದಿತ್ತು. ಕೆಲವು ಮಾಧ್ಯಮಗಳು ಗ್ಯಾಂಗ್ ರೇಪ್ ಖಾತ್ರಿಯಾಗುವ ಮುನ್ನವೇ, ಗ್ಯಾಂಗ್ ರೇಪ್ ನಡೆದೇಹೋಗಿದೆ ಎಂಬ ಕೋನದಲ್ಲಿ ಸುದ್ದಿ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಸಂಪೂರ್ಣ ವಿಚಾರವನ್ನು ಚರ್ಚಿಸುವ ಮುನ್ನ, ಮಾದ್ಯಮಲೋಕದ ಅಭಾಸಗಳ ಬಗ್ಗೆ ಮಾತಾಡಲೇಬೇಕು. ಸಮಾಜಮುಖಿ ಚಿಂತನೆ, ಸಾಮಾಜಿಕ ದೃಷ್ಠಿಕೋನ ಹೊಂದಬೇಕಿದ್ದ ಮಾಧ್ಯಮ ಇವತ್ತು ಹಲವು ಆರೋಪಗಳಿಗೆ ತುತ್ತಾಗುತ್ತಿವೆ. ಅವಕ್ಕೆ ಕಾರಣ ಯಾವುದೇ ಪಿತೂರಿಯಲ್ಲ. ಸ್ವಯಂಕೃತಪರಾಧವೇ ಹೆಚ್ಚಿರುತ್ತದೆ. ನಿರ್ದಿಷ್ಟ ಘಟನೆಯನ್ನು ಚರ್ಚಿಸುವುದಕ್ಕಿಂತ, ಜಡ್ಜ್ ಮೆಂಟ್ ಕೊಡುವ ಮಟ್ಟಕ್ಕೆ ಮಾದ್ಯಮ ಹದ್ದುಮೀರಿ ಹೋಗಿದೆ. ಎಲ್ಲೋ ಒಂದು ಕಡೆ ಸರ್ಕಾರದ ಆಡಳಿತ ಯಂತ್ರದ ಜೊತೆ ಸೇರಿ ಮೀಡಿಯಾ ಎಥಿಕ್ಸ್ ಅನ್ನೇ ಮರೆಯುತ್ತಿದೆ ಎಂದರೇ ಸುಳ್ಳಲ್ಲ. ಅದಕ್ಕೆ ಜೆಎನ್ಯು ಪ್ರಕರಣಕ್ಕಿಂತ ಬೇರೆ ದೃಷ್ಟಾಂತ ಬೇಕಿಲ್ಲ.
ಸುಪ್ರಿಂ ಕೋರ್ಟ್ ಖಂಡಾತುಂಡವಾಗಿ ಕೆಲವು ಪ್ರಬಲ ಸಮುದಾಯಗಳಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದರೂ, ಈ ದೇಶದಲ್ಲಿ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಹಿಂಸಾತ್ಮಕ ಹೋರಾಟಕ್ಕೆ ಬೇಸತ್ತು ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಕೊಡುತ್ತದೆ. ಇಂತಹ ಹಲವು ಹೋರಾಟಗಳಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದು ಹರ್ಯಾಣದ ಜಾಟ್ ಸಮುದಾಯದ ಹೋರಾಟ. ಒಂದು ಹಂತದಲ್ಲಿ ವಿಕೋಪಕ್ಕೆ ಹೋಗಿ ಸಾವುನೋವುಗಳಿಗೆ ಕಾರಣವಾಯಿತು. ಆಸ್ತಿಪಾಸ್ತಿ ನಷ್ಟವಾಯಿತು. ಹೀಗಿರುವಾಗ ಇದ್ದಕ್ಕಿದ್ದಂತೆ ಜಾಟರ ಹೋರಾಟದ ಸಮಯದಲ್ಲಿ ನಲವತ್ತು ಮಂದಿ ಪುಂಡರು ಹತ್ತು ಮಂದಿ ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂಬ ಸುದ್ದಿ ದೇಶವನ್ನು ಬೆಚ್ಚಿಬೀಳಿಸಿತ್ತು. ಹೋರಾಟದ ನೆಪದಲ್ಲಿ ಕೆಲವು ಪುಂಡರು ಹೀನಾ ಕೃತ್ಯ ನಡೆಸಿದ್ದು, ಇಡೀ ಹೋರಾಟ ಯೂಟರ್ನ್ ತೆಗೆದುಕೊಂಡಿತ್ತು. ಈ ಹೊತ್ತಿಗೆ ಜಾಟರ ಹೋರಾಟವನ್ನು ಹತ್ತಿಕ್ಕಲು ಪ್ರಿಪ್ಲಾನ್ ನಡೆದಿದೆಯಾ..? ಅದಕ್ಕೆ ಮಾದ್ಯಮಗಳು ಸಾಥ್ ಕೊಟ್ಟಿದೆಯಾ..? ಎಂಬ ಅನುಮಾನಗಳೂ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣ ಈ ಹಿಂದೆ ಪಟೇಲರಿಗೆ ಮೀಸಲಾತಿ ಕೊಡುವಂತೆ ಬೀದಿಗಿಳಿದು ಗುಜರಾತ್ ನಲ್ಲಿ ಕಿಚ್ಚು ಹತ್ತಿಸಿದ್ದ ಹಾರ್ದಿಕ್ ಪಟೇಲ್ ನನ್ನು ಹೆಣ್ಣೊಬ್ಬಳ ವಿಚಾರದಲ್ಲಿನ ಸಿಲುಕಿಸುವ ಪ್ರಯತ್ನ ನಡೆದಿತ್ತು. ಮಾತು ಕೇಳದವರನ್ನು ಈ ರೀತಿಯಾಗಿ ಸುಮ್ಮನಾಗಿಸೋದು ಸರ್ಕಾರದ ಹುನ್ನಾರ ಎನ್ನಲಾಗಿತ್ತು.
ಆದರೆ ಇದೀಗ ಜಾಟರ ಗ್ಯಾಂಗ್ ರೇಪ್ ಪ್ರಕರಣದ ಪ್ರತ್ಯಕ್ಷದರ್ಶಿ ಬಾಬಿ ಜೋಷಿಗೆ ಬೆದರಿಕೆ ಕರೆ ಬಂದಿರುವ ಸುದ್ದಿಯಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಾಕ್ಷ್ಯ ಹೇಳದಂತೆ ಅವರ ಮೇಲೆ ಒತ್ತಡ ತರಲಾಗಿದೆಯಂತೆ. ಕರೆ ಮಾಡಿದ್ದು ಯಾರು..? ಎಲ್ಲಿಂದ ಕರೆ ಬಂದಿದೆ..? ಇತ್ಯಾದಿಗಳ ಜಾಡು ಹಿಡಿದು ಪೊಲೀಸರು ಹೊರಟಿದ್ದಾರೆ. ಮುಂದೇನಾಗುತ್ತೋ ಕಾದುನೋಡಬೇಕಿದೆ.
- ರಾ ಚಿಂತನ್.
POPULAR STORIES :
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!