ಇದು ಸ್ಯಾಂಡಲ್ವುಡ್ ನ ಸೂಪರ್ ನ್ಯೂಸ್…ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಷ್ಟೇ ಅಲ್ಲ ಶಿವಣ್ಣ ಲಾಂಗ್ ಹಿಡಿದ್ರೆ ದರ್ಶನ್ ಹಿಂದೆ ನಿಂತಿರ್ತಾರಂತೆ!
ಶಿವಣ್ಣ ಮತ್ತು ದರ್ಶನ್ ಶಿವಣ್ಣನ ಅತ್ತೆಮಗ ಧ್ರುವನ್ ಮತ್ತು ಮಲೆಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಸಿನಿಮಾದ ಮುಹೂರ್ತಕ್ಕೆ ಬಂದಾಗ ಈ ಸುದ್ದಿ ಹೊರಬಂದಿದೆ. ನಿಮ್ಮಿಬ್ಬರ ಕಾಂಬಿನೇಷನಲ್ಲಿ ಸಿನಿಮಾ ಬರುತ್ತಾ ಎಂದಾಗ ದರ್ಶನ್ ನಮ್ಮನ್ನು ಹ್ಯಾಂಡಲ್ ಮಾಡೋ ಡೈರೆಕ್ಟರ್ ಇಲ್ಲ. ಅಂಥಾ ಕಥೆ ತಗೊಂಡು ಬರ್ಲಿ ಮಾಡುತ್ತೇವೆ ಎಂದರು. ಶಿವಣ್ಣ ಈ ಬಗ್ಗೆ ನಾವು ಹಿಂದೆ ಕೂಡ ಮಾತಾಡಿದ್ದೇವೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಮಾಡುತ್ತೇವೆ. ಖಂಡಿತಾ ಆ ದಿನ ಬರುತ್ತೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಯಾರು ಲಾಂಗ್ ಹಿಡಿಯುತ್ತೀರಿ ಎಂದಾಗ ಶಿವಣ್ಣ ಇಬ್ಬರೂ ಹಿಡಿಯುತ್ತೇವೆ ಎಂದರು! ದರ್ಶನ್ ಶಿವಣ್ಣ ಹಿಡಿಯುತ್ತಾರೆ. ಅವರ ಹಿಂದೆ ನಾನು ನಿಂತಿರ್ತೀನಿ ಎಂದಿದ್ದಾರೆ.
ಒಟ್ಟಿನಲ್ಲಿ ಶಿವಣ್ಣ ಮತ್ತು ದರ್ಶನ್ ಗೆ ಒಟ್ಟಿಗೇ ಸಿನಿಮಾ ಮಾಡುವ ಕನಸಿದ್ದು. ಉತ್ತಮ ಕಥೆ ಸಿಕ್ಕಲ್ಲಿ ಸಿನಿಮಾ ಸೆಟ್ಟೇರೋದ್ರಲ್ಲಿ ಡೌಟಿಲ್ಲ.
ಒಂದೇ ಸಿನಿಮಾದಲ್ಲಿ ಶಿವಣ್ಣ – ದಚ್ಚು : ಶಿವಣ್ಣ ಲಾಂಗ್ ಹಿಡಿದ್ರೆ ಹಿಂದೆ ನಿಂತಿರ್ತಾರಂತೆ ದರ್ಶನ್ ..!
Date: