ಬಿಡದಿ ನಿತ್ಯಾನಂದ ದೇಶ ಬಿಟ್ಟು ಓಡಿ ಹೊಗಿದ್ದಾನೆ ಎಂಬ ಸುದ್ದಿ ನಿನ್ನೆ ಇಂದ ಹರಿದಾಡುತ್ತಿದೆ ಇದರ ಬಗ್ಗೆ ಸಾಕ್ಷಿಗೊಸ್ಕರ ಪೋಲಿಸ್ ನವರು ಕೂಡ ಹುಡುಕುತ್ತಿದ್ದಾರೆ ಇದರ ಮಧ್ಯೆ ಡಿಕೆ ಶಿವಕುಮಾರ್ ಅವರು ನಿತ್ಯಾನಂದರನ್ನು ಬೇಟಿ ಮಾಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್, ನಾನು ನಿತ್ಯಾನಂದ ಸ್ವಾಮಿ ಅವರನ್ನು ಒಂದು ವರ್ಷದ ಹಿಂದೆ ಭೇಟಿ ಮಾಡಿದ್ದೆ. ಚುನಾವಣೆಯ ಸಮಯದಲ್ಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ ವೇಳೆ ಕೆಲವು ನಿಮಿಷಗಳ ಕಾಲ ಅವರ ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
ನಾವು ಹಲವು ದೇವ ಮಾನವರನ್ನು ಭೇಟಿ ಮಾಡುತ್ತೇವೆ. ನಿತ್ಯಾನಂದ ಸ್ವಾಮಿಯ ಆಶ್ರಮ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ಬರುತ್ತದೆ. ಆದರೆ, ಅವರ ವಿರುದ್ಧದ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.