ಆಕೆ ವಿಧವೆ….ಮತ್ತೊಂದು ಮದುವೆಗೆ ಸೂಕ್ತ ಜೊತೆಗಾರನನ್ನು ಬಯಸಿ ಶಾದಿ ಡಾಟ್ ಕಾಂ.ನಲ್ಲಿ ತನ್ನ ಬಯೋಡೆಟಾ ಅಪ್ ಮಾಡಿದ್ದಳು…ಅವಳನ್ನು ಮೆಚ್ಚಿ ಒಬ್ಬಾತ ಮದುವೆಗೆ ಮುಂದೆ ಬಂದಿದ್ದ…ಈಕೆ ಕೂಡ ಮದುವೆಗೆ ಒಪ್ಪಿದ್ದಳು. ಆದರೆ ಆಗಿದ್ದೇ ಬೇರೆ..ಆತ ಆಕೆ ಮಾಡಿದ್ದು ‘ಚಿನ್ನ’ದ ಮಹಾ
ಮೋಸ…!
ಈ ಘಟನೆ ನಡೆದಿರುವುದು ದೂರದಲ್ಲೆಲ್ಲೋ ಅಲ್ಲ…ನಮ್ಮ ಅರಮನೆ ನಗರಿ ಮೈಸೂರಲ್ಲಿ. ಆಕೆಯ ಹೆಸರು ನಳಿನಿ. ವಿಧವೆಯಾಗಿರುವ ಅವರು ಮರು ಮದುವೆಗೆ ಶಾದಿ ಡಾಟ್ ಕಾಮ್ ಮೊರೆ ಹೋದಾಗ ಪರಿಚಯವಾದವ ವಿನೀತ್…! ಚೆನ್ನೈ ಮೂಲದ ವಿನೀತ್ ಮೊನ್ನೆ ಮೊನ್ನೆ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ನಳಿನಿ ಜೊತೆ ಮದುವೆ ಮಾತುಕತೆ ನಡೆಸಿದ್ದ…ಅದಾದ ಮೇಲೆ ಆಕೆಯನ್ನು ರೆಸ್ಟೋರೆಂಟ್ ಒಂದಕ್ಕೆ ಕರೆದುಕೊಂಡು ಹೋಗಿ…ದೋಷ ಪರಿಹಾರಕ್ಕೆಂದು ತನ್ನ ಸರ ನಿಮಗೆ ಕೊಡ್ತೀನಿ ನಿಮ್ಮ ಸರ ನನಗೆ ಕೊಡಿ ಎಂದು ಅದುಲು -ಬದಲು ಮಾಡಿಕೊಂಡಿದ್ದಾನೆ. ನಳಿನಿ ರೆಸ್ಟ್ ರೂಂಗೆ ಹೋದಾಗ ಸರ ಎಗರಸಿಕೊಂಡು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಕೆ ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.