ಇತ್ತಿಚಿದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ ಒಂದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ್ ಸವದಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಮ್ಮ ಸಹೋದರಿ, ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ‘ಬೆಳಗಾವಿ ರಾಜಕೀಯ ಬದಲಿಸಬಲ್ಲೆ’ ಎಂದು ಅವರು ಅದೇ ಕಾರಣಕ್ಕೆ ಹೇಳಿರಬಹುದು. ಅವರು ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ.
ರಾಜಕೀಯ ದೃವೀಕರಣ ಹಿನ್ನೆಲೆ ಅವರು ತಮ್ಮ ಪಕ್ಷ ಬಿಟ್ಟು ನಮ್ಮಲ್ಲಿ ಬರಬಹುದು ಬಂದರೆ ಸ್ವಾಗತಿಸುತ್ತೆವೆ ಎಂದರು ಆದರೆ ರಾಜಕೀಯದಲ್ಲಿ ಯಾರು ಯಾವ ಸಮಯದಲ್ಲಿ ಬದಲಾಗುತ್ತೆ ಹೇಳಲಿಕ್ಕೆ ಆಗುವುದಿಲ್ಲ ಇದರಿಂದ ಯಾವ ಸರ್ಕಾರ ಬೇಕಾದರು ಅಧಿಕಾರ ಕಳೆದುಕೊಳ್ಳಬಹುದು ಉಳಿಯಬಹುದು ಹಾಗೆ ಇದೀಗ ಉಪಚುನಾವಣೆ ಇರುವುದರಿಂದ ಅದರ ಕಾವು ಹೆಚ್ಚಾಗಿದೆ ಎಲ್ಲ ನಾಯಕರು ಒಬ್ಬರ ಮೇಲೊಬ್ಬರು ಕೆಸರು ಎರಚಾಟವನ್ನು ಮಾಡಿಕೊಳ್ಳುತ್ತಿದ್ದಾರೆ . ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟುಕೊಂಡು ಬರುತ್ತಿದ್ದಾರೆ.