ನಟ ಧೃವಸರ್ಜಾ ಇಂದು ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದಲೂ ಧೃವ ಹಾಗೂ ಪ್ರೇರಣಾ ಅವರ ಮನೆಯಲ್ಲಿ ಮದುವೆ ಶಾಸ್ತ್ರ ನಡೆಯುತ್ತಿದ್ದು, ನಿನ್ನೆ ಅದ್ಧೂರಿಯಾಗಿ ಧೃವ ಮತ್ತು ಪ್ರೇರಣಾ ಹಿಂದೂ ಸಂಪ್ರದಾಯದಂತೆ ಹೊಸ ಜೀವನಕ್ಕೆ ಕಾಲಿರಿಸಿದರು.
ಆ್ಯಕ್ಷನ್ ಪ್ರಿನ್ಸ್ ವಾಸ್ ಅವರು ತಮ್ಮ ಅಭಿಮಾನಿಗಳಿಗಾಗಿ ಇಂದು ಭರ್ಜರಿಯಾಗಿ ಔತಣಕೂಟ ಏರ್ಪಡಿಸಲಾಗಿತ್ತು. ನೆನ್ನೆ ನಡೆದ ವಿವಾಹ ಸಂದರ್ಭದಲ್ಲಿ ನಟ ಅರ್ಜುನ್ ಸರ್ಜಾ, ಸಹೋದರ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪುನಿತ್ ರಾಜ್‍ಕುಮಾರ್, ಅಶ್ವಿನಿ ಪುನಿತ್ ರಾಜ್‍ಕುಮಾರ್, ಯಶ್ ಸುದೀಪ್. ಪ್ರಮೀಳಾ ಜೋಷಾಯ್, ಸುಂದರ್‍ರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ನೆರೆದಿದ್ದರು.