ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎದುರು ಮಾತನಾಡಲು ಬಿಜೆಪಿ ಯಲ್ಲಿ ಯಾರಿಗು ಧಮ್ ಇಲ್ಲ. ಏಕೆಂದರೆ ಮೋದಿಯಿಂದ ಗೆದ್ದಿದ್ದೇವೆಂಬ ಹೆದರಿಕೆ ಅವರಲ್ಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಬಿಜೆಪಿಗರಿಗೆ ಟೀಕಿಸಿದ್ದಾರೆ.
ಹಾಗೆ ನಮ್ಮ ಸಮ್ಮಿಶ್ರ ಸರ್ಕಾರವಿದ್ದಾಗ ನೆರೆ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತ್ತು. ಆದರೆ, ಈ ಭಾರಿಯ ನೆರೆ ಹಾವಳಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಿ ಭರವಸೆ ಕೊಡುವುದರಲ್ಲೇ ಬ್ಯೂಸಿಯಾಗಿದೆ ಎಂದು ತಿರುಗೇಟು ನೀಡಿದರು.