ಚುನಾವಣಾ ಪ್ರಚಾರದ ವೇಳೆ ಮಾಕವಳ್ಳಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಇಂದು ಜೆಡಿಎಸ್ ಪಕ್ಷ ಕಷ್ಟದಲ್ಲಿದ್ದು, ದಯಮಾಡಿ ಉಳಿಸಿಕೊಡಿ ಎಂದು ಮನವಿ ಮಾಡಿದರು. ಹಾಗು ಲೋಕಸಭಾ ಚುನಾವಣೆ ನನಗೆ ಸಾಕಷ್ಟು ಪಾಠ ಕಲಿಸಿದೆ. ದೊಡ್ಡ ಮಟ್ಟದ ಅನುಭವ ಪಡೆದಿದ್ದೇನೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ ದೊಡ್ಡ ಅನುಭವ ಆಗಿದೆ. ನಾನು ರಾಜಕೀಯ ಷಡ್ಯಂತ್ರದಿಂದ ಸೋತಿರಬಹುದು. ಆದರೆ, ಜನರು ನನಗೆ ಮೋಸ ಮಾಡಿಲ್ಲ.
ನನ್ನ ಮನಸ್ಸಲ್ಲಿ ಸೋಲಿನ ಯಾವುದೇ ನೋವು ಇಲ್ಲ ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಕುಮಾರಸ್ವಾಮಿ ಅವರ ಬೆನ್ನಿಗರ ಚೂರಿ ಹಾಕಿ ಕೆಲವು ಶಾಸಕರು ಪಕ್ಷಬಿಟ್ಟು ಹೋದರು ಆದರೆ ಜೆಡಿಎಸ್ ಎಂದು ಕುಗ್ಗಲ್ಲ ಈ ಉಪಚುನಾವಣೆಯಲ್ಲಿ ಜನನಮ್ಮನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು.