ಕಳೆದ ವರ್ಷ ಮೋದಿ ಸರ್ಕಾರ ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ್ ಯೋಜನೆಯನ್ನು ಜಾರಿಗೆ ತಂದಿದೆ. ಸಂಘಟಿತ ವಲಯದ ನೌಕರರು ಕೆಲಸ ಕಳೆದುಕೊಂಡ್ರೆ ಕೇಂದ್ರ ಸರ್ಕಾರ ಈ ಯೋಜನೆಯಡಿ 24 ತಿಂಗಳವರೆಗೆ ಆರ್ಥಿಕ ಸಹಾಯ ನೀಡುತ್ತದೆ. ಕೆಲ ದಿನಗಳ ಹಿಂದೆ ನೌಕರರ ರಾಜ್ಯ ವಿಮಾ ನಿಗಮ ಈ ಬಗ್ಗೆ ಟ್ವೀಟ್ ಮಾಡಿದೆ.
ಎರಡು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿರುವ ಹಾಗೂ ಇಎಸ್‌ಐಸಿಯಲ್ಲಿ ವಿಮೆ ಮಾಡಿರುವವರು ಈ ಲಾಭ ಪಡೆಯಬಹುದಾಗಿದೆ. ಇದ್ರ ಜೊತೆ ಆಧಾರ್, ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಎಂದುಕೂಡ ಹೇಳಲಾಗಿದೆ.