ಡಿಕೆಶಿಗೆ ತಿಹಾರ್ ಜೈಲಿನಿಂದ ಜಾಮೀನು ಆದ ನಂತರ ಮೊದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಜಿ ಸಚಿವ ಡಿಕೆಶಿ ಮನೆ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿರುವ ಡಿಕೆಶಿ ಹಾಗೂ ಆಪ್ತರ ಹೆಸರುಗಳೂ ಇದ್ದವು. ಪ್ರಕರಣದಲ್ಲಿರುವ ತಮ್ಮ ಹೆಸರು ಕೈಬಿಡುವಂತೆ ಡಿಕೆಶಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಡಿಕೆಶಿ ಸಚಿವರಾಗಿದ್ದ ವೇಳೆ ಅವರ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹೈಕೋರ್ಟ್ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು, ಈ ಹಿನ್ನೆಲೆಯಲ್ಲಿ ಡಿಕೆಶಿ ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾಗಿದ್ದರು ಎನ್ನಲಾಗುತ್ತಿದೆ.