ಉಪಚುನಾವಣೆ ಪ್ರಚಾರದ ಸಮದಲ್ಲಿ ಒಬ್ಬರಮೇಲೊಬ್ಬರು ಮಾತಿನ ಸಮರ ಮಾಡುವುದು ಹೊಸದೇನಲ್ಲ ಇದೀಗ ಆಯನೂರ್ ಮಂಜುನಾಥ್ ಅವರು ರಮೇಶ್ ಜಾರಕಿಹೊಳಿ ಭಸ್ಮಾಸುರ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ರಮೇಶ್ ಭಸ್ಮಾಸುರ ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಮೋಹಿನಿ ಆಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಹಸುವಿಗೆ ಕೋಡು ಮೂಡುವಾಗ ತುರಿಕೆ ಜಾಸ್ತಿ. ಮೊದಲ ಬಾರಿಗೆ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಿತಿಮೀರಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮನ್ನು ತಾವೇ ಕಿತ್ತೂರು ರಾಣಿ ಚೆನ್ನಮ್ಮ ಎಂದು ಹೇಳಿಕೊಳ್ಳುವ ವಿಶೇಷ ಮಹಿಳೆ.ಅವರನ್ನು ಬೆಳೆಸಿದಂತಹ ಮಹಾನ್ ನಾಯಕರು ಕಾಂಗ್ರೆಸ್ ನಲ್ಲಿದ್ದಾರೆ ಅದನ್ನು ಅವರು ಮರೆಯಬಾರದು ಎಂದರುು.