ನಾನೇನು ತಪ್ಪು ಮಾಡಿದೆ ಎಂದು ನನ್ನನ್ನು ಕೈಬಿಟ್ಟಿರಿ ಎಂದು ಭಾವುಕರಾದ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಬರೆದಿದ್ದ ಪತ್ರವನ್ನು ಓದಿದ ಕುಮಾರಸ್ವಾಮಿ, ನಾನು ಮಗನನ್ನು ಚುನಾವಣೆಗೆ ನಿಲ್ಲಿಸಲು ಬಯಸಿರಲಿಲ್ಲ. ನೀವೇ ಒತ್ತಾಯ ಮಾಡಿ ಸ್ಪರ್ಧೆ ಮಾಡುವಂತೆ ಹೇಳಿದ್ದೀರಿ.
ನೀವೇ ನನ್ನನ್ನು ಕೈಬಿಟ್ಟಿರಿ ಎಂದು ಭಾವುಕರಾಗಿದ್ದಾರೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ , ಹೆಚ್.ಡಿ. ಕುಮಾರಸ್ವಾಮಿ ಕಣ್ಣೀರು ಪ್ರವಾಹಕ್ಕಿಂತ ಹೆಚ್ಚು ಕೊಚ್ಚಿ ಹೋಗುತ್ತದೆ ಎಂದು ಭಾವಿಸಿದ್ದಾರೆ. ಕೆಆರ್ ಪೇಟೆ ಯಲ್ಲಿ , ಕಣ್ಣೀರಿನ ಪ್ರವಾಹದಲ್ಲಿ ಮತದಾರರು ಕೊಚ್ಚಿ ಹೋಗುತ್ತಾರೆ ಎಂಬ ಹುಚ್ಚುತನದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಹೇಳಿದ್ದಾರೆ .