ಅವರ ಕುಟುಂಬ ಚೆನ್ನಾಗಿಯೇ ಇತ್ತು. ಪ್ರೀತಿಯಿಂದ ಕಾಲ ಕಳೆಯುತ್ತಿದ್ದರು. ಆರ್ಥಿಕ ಕಷ್ಟಗಳೂ ಅವರನ್ನು ಬಾಧಿಸಿರಲಿಲ್ಲ. ಗಂಡ, ಹೆಂಡ್ತಿ ಮತ್ತು ಇಬ್ಬರು ಮಕ್ಕ ಅನ್ಯೂನ್ಯ ಕುಟುಂಬ ಅವರದ್ದಾಗಿತ್ತು. ಆದರೆ ಅದೇನಾಯಿತೋ ಅವನು ಅವನ ಕುಟುಂಬವನ್ನೇ ಸರ್ವನಾಶ ಮಾಡಿದ… ತಾನೂ ಸತ್ತ.
ಹೀಗೆ ವ್ಯಕ್ತಿಯೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ. ತಾನು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿರುವುದು ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸೆಟ್ವಳ್ಳಿ ಎಂಬಲ್ಲಿ.
ಸೂರ್ಯನಾರಾಯಣ ಭಟ್ ಎಂಬ 50 ವರ್ಷದ ವ್ಯಕ್ತಿ ತನ್ನ ಪತ್ನಿ, ಮಕ್ಕಳನ್ನು ಹತ್ಯೆಗೈದು, ತಾನು ಆತ್ಮಹತ್ಯೆ ಮಾಡಿಕೊಂಡವವ. ಮಾನಸಿ (40) ಪತ್ನಿ, ಸುಧೀಂದ್ರ (14), ಸುಧೀಶ್ (8) ಹತ್ಯೆಯಾದವರು. ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ಸಂಜೆ ಸೂರ್ಯನ ಅಣ್ಣ ಸೂರ್ಯ ಮನೆ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ರೈತರಾಗಿದ್ದ ಸೂರ್ಯನಾರಾಯಣ ಭಟ್ ಅವಗವಾಗ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಬುಧವಾರ ಸಂಜೆ ಕೂಡ ಕೆಲಸಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದ ಸೂರ್ಯನಾರಾಯಣ್ ಹೋಗಿರಲಿಲ್ಲ. ಅಡುಗೆಯವರು ಕರೆ ಮಾಡಿದಾಗ ಸೂರ್ಯನಾರಾಯಣ್ ಮತ್ತು ಅವರ ಪತ್ನಿ ಮೊಬೈಲ್ ಕೂಡ ಸ್ವಿಚ್ ಆಫ್ ಬಂದಿದೆ. ಆದ್ದರಿಂದ ಅವರ ಅಣ್ಣನಿಗೆ ಕರೆಮಾಡಿದ್ದಾರೆ. ಬಳಿಕ ಅವರು ಮನೆ ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮುಂಜಾನೆ ಈ ಘಟನೆ ನಡೆದಿರಬಹುದು ಎಂದು ತಿಳಿದುಬಂದಿದೆ. ಹತ್ಯೆಯಾದವರ ತಲೆಯಲ್ಲಿ ಹರಿತವಾದ ವಸ್ತುವಿನಿಂದ ಚುಚ್ಚಿರುವ ಗಾಯಗಳಿದ್ದು, ಸೂರ್ಯ ನಾರಾಯಣ್ ಪತ್ನಿ, ಮಕ್ಕಳಿಗೆ ವಿಷ ಉಣಿಸಿ, ತಲೆಗೆ ಹರಿತವಾದ ಆಯುಧದಿಂದ ಚುಚ್ಚಿ ಹತ್ಯೆ ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿದೆ.
ಮಕ್ಕಳಾದ ಸುಧೀಂದ ಹೆಬ್ರಿಯ ಎಸ್ ಆರ್ ಎಸ್ ಶಾಲೆಯಲ್ಲಿ ಎಂಟನೇ ತರಗತಿ, ಸುಧೀಶ್ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಸೂರ್ಯ ಅವರ ಒಬ್ಬ ಸಹೋದರ ಬೆಂಗಳೂರಲ್ಲಿ, ಇನ್ನೊಬ್ಬ ಸಹೋದರ ಊರಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಸಹೋದರಿ ಶಿಕ್ಷಕಿ ಎಂದು ತಿಳಿದುಬಂದಿದೆ.
ಕೌಟುಂಬಿಕವಾಗಿ ಸುಖವಾಗಿದ್ದ ಸೂರ್ಯನಾರಾಯಣ್ ಆರ್ಥಿಕವಾಗಿಯೂ ಸದೃಢವಾಗಿದ್ದರು ಎನ್ನಲಾಗಿದ್ದು ಘಟನೆಗೆ ಕಾರಣ ತಿಳಿದುಬಂದಿಲ್ಲ. ಶಂಕರನಾರಾಯಣ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ ಪಿ ನಿಶಾ ಜೇಮನ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯಿಂದ ಘಟನೆಗೆ ಕಾರಣ ತಿಳಿದುಬರಲಿದೆ.