ಕಳೆದ ನಾಲ್ಕು ವರ್ಷದ ಹಿಂದೆ ಅವರಿಬ್ಬರ ಮದುವೆಯಾಗಿತ್ತು. ಆಕೆಗೆ ಒಂದು ವರ್ಷದ ಮಗು ಕೂಡ ಇದೆ. ಆದರೆ, ಮದುವೆಯಾಗಿ ನಾಲ್ಕೈದು ವರ್ಷವಾದರೂ, ಮಗುವಾದರೂ ವರದಕ್ಷಿಣೆ ಕಿರುಕುಳ ತಪ್ಪಿಲ್ಲ. ಕೊನೆಗೆ ಗಂಡ ಎನಿಸಿಕೊಂಡ ಆಸಾಮಿ ತಲಾಕ್ ನೀಡಿದ್ದಾನೆ. ಆ ಬಳಿಕ ಕೆಲವೇ ಕೆಲವುಗಂಟೆಗಳಲ್ಲಿ ಮಾವನೆಂಬ ಕಾಮುಕ ಸಂಬಂಧಿಕರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾನೆ.
ಹೌದು ಮಗ ತಲಾಕ್ ನೀಡಿದ ಕೆಲವೇ ಕೆಲವು ಗಂಟೆಗಳಲ್ಲಿ ಮಾವ ಸೊಸೆಯ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ನಡೆದಿದೆ.
2015ರಲ್ಲಿ ಮದುವೆಯಾಗಿದ್ದ ಮಹಿಳೆ ಒಂದು ವರ್ಷದ ಮಗುವಿನ ತಾಯಿಯಾಗಿದ್ದು, ಪತಿ ಮತ್ತು ಕುಟುಂಬ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಅಲ್ಲೆ ಮೊನ್ನೆ ನವೆಂಬರ್ 20ರಂದು ರೂಮಿನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ನವೆಂಬರ್ 22ರಂದು ಪತಿ ತಲಾಕ್ ನೀಡಿದ್ದಾನೆ. ನಂತರ ರಾತ್ರಿ ಮಾವ ಮತ್ತು ಸಂಬಂಧಿಕರು ರೂಮಿಗೆ ಹೋಗಿ ಆಕೆಗೆ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮರುದಿನ ಬೆಳಗ್ಗೆ ಸಂತ್ರಸ್ತೆ ತನ್ನ ತಂದೆಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ತಂದೆಯ ಜೊತೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ.