ಉಪಚುನಾವಣೆಯ ಪ್ರಚಾರದ ವೇಳೆ ಕುಮಾರಸ್ವಾಮಿ ಅವರು ಕಣ್ಣಿರಿಟ್ಟಿದಕ್ಕೆ ಸದಾನಂದ ಗೌಡ ಅವರು ವೆಂಗ್ಯಮಾಡಿದ್ದಾರು ಅದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಬಡವರ ಕಷ್ಟ ನೋಡಿದರೆ ಸಹಜವಾಗಿ ಭಾವುಕರಾಗಿ ಕಣ್ಣೀರು ಬರುತ್ತದೆ. ಮಾನವೀಯತೆ ಗೊತ್ತಿದ್ದರೆ ತಾನೆ ಕಣ್ಣೀರು ಬರುವುದು ಎಂದು ಹೇಳಿದರು. ಎಷ್ಟು ಜನ ನೋಡಿ ನೀವು ಕಣ್ಣೀರು ಹಾಕಿದ್ದೀರಿ. ನಾಟಕ ಆಡುವವರ ಕಡೆಯಿಂದ ನೀವು ಬಂದಿದ್ದೀರಿ.
ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಜನರಿಗಾಗಿ ನಾವು ಕಣ್ಣೀರು ಹಾಕುವುದು ನಾನು ಬಿಜೆಪಿಯವರನ್ನು ಮೆಚ್ಚಿಸಲು ಕಣ್ಣೀರು ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಜನರ ಹಾಗೂ ನನ್ನ ನಡುವಿನ ಬಾಂಧವ್ಯದಲ್ಲಿ ನಾನು ಕಣ್ಣೀರಿಟ್ಟಿದ್ದಾನೆ ನಾಟಕ ಮಾಡಲು ನನಗೆ ಬರುವುದಿಲ್ಲ ಆ ಬುದ್ಧಿ ಇರುವುದು ಎಂದು ಸದಾನಂದ ಗೌಡ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ .