ಬೈಕ್ ಸವಾರರು ಹೆಲ್ಮೆಟ್ ಹಾಕಬೇಕು ಎಂಬ ಸಂಚಾರಿ ನಿಯಮವಿದೆ. ಈ ನಿಯಮ ಉಲ್ಲಂಘನೆಯಾದರೆ ದಂಡ ಕಟ್ಟಬೇಕು. ಆದರೆ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್ ಹಾಕಿಕೊಂಡೇ ಪಾಠ ಮಾಡುವುದನ್ನು ಕಂಡಿದ್ದೀರಾ? ಇದು ವಿಚಿತ್ರ ಎನಿಸಿದರೂ ನಂಬಲೇ ಬೇಕಾದ ಸುದ್ದಿ.
ತೆಲಂಗಾಣದ ವಾರಂಗಲ್ಲಿನ ಸೀತಾನಗರಂ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್ ಹಾಕಿಕೊಂಡು ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಎಲ್ಲಾ ಮೂರೂ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಯಾವಾಗ ಬೇಕಾದರೂ ಕಟ್ಟಡ ಕುಸಿದು ಬೀಳಬಹುದೆಂಬ ಆತಂಕದಲ್ಲಿ ಮುಂಜಾಗೃತ ಕ್ರಮವಾಗಿ ಹೆಲ್ಮೆಟ್ ಹಾಕಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಮಕ್ಕಳ ಪರಿಸ್ಥಿತಿ ತಿಳಿದಿಲ್ಲ.
ಈ ಶಾಲೆಯಲ್ಲಿ ಮೇಷ್ಟ್ರು ಹೆಲ್ಮೆಟ್ ಇಲ್ದೆ ಪಾಠನೇ ಮಾಡಲ್ಲ!
Date: