ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ತಂಭ. ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಉತ್ತಮ ವ್ಯಕ್ತಿಯಾಗಿರುವ ಎಂ.ಶಿವರಾಜು ಅವರನ್ನು ಕಣಕ್ಕಿಳಿಸಲಾಗಿದೆ. ಇವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಪಕ್ಷಾಂತರಿಗಳಿಗೆ ಮುಟ್ಟಿನೋಡಿಕೊಳ್ಳುವಂತಹ ಎಚ್ಚರಿಕೆ ನೀಡಿ ಅನರ್ಹ ಶಾಸಕರೆಂದು ಹೇಳಿಕೊಂಡು ಮಾರಾಟಕ್ಕೆ ಇಳಿದಿರುತ್ತದೆ ಕಂತ ಗೋಪಾಲಯ್ಯ ಅವರು ಜೆಡಿಎಸ್ಗೆ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಅವರ ಸ್ವಂತ ಉಪಯೋಗ ಕ್ಕೋಸ್ಕರ ಪಕ್ಷ ಬದಲಾವಣೆ ಮಾಡಿದ್ದರೆ ಜನರಿಗೆ ಅವರಿಂದ ಯಾವುದೇ ಉಪಯೋಗವೂ ಇಲ್ಲ ಜನರು ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಬೇಕೆಂದು ಡಿಕೆಶಿಯವರು ಹೇಳಿದರು .
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಹೋಗಿರುವ ಅನರ್ಹ ಶಾಸಕ ಗೋಪಾಲಯ್ಯ ನನ್ನು ಮತ್ತೆ ಗೆಲ್ಲಿಸಬೇಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡರು