ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಳಿ ಟನ್ನುಗಟ್ಟಲೆ ದುಡ್ಡಿದೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ರೀತಿ ಖರ್ಚು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಅಖಾಡಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ಯಡಿಯೂರಪ್ಪ ವಿರುದ್ಧ ಗರಂ ಆದರು.
ಅನರ್ಹ ಶಾಸಕರಿಗೆ ಉಪಚುನಾವಣೆಗಾಗಿ ಯಡಿಯೂರಪ್ಪ 20 ಕೋಟಿ ರೂ ನೀಡಿದ್ದಾರೆ. ನಿಮ್ಮ ಬಳಿ ಬಾಂಬೆ ನೋಟು ತರುತ್ತಾರೆ, ಅದಕ್ಕೆ ಬಲಿಯಾಗಬೇಡಿ. ಬಾಂಬೆ ನೋಟು ತೆಗೆದುಕೊಂಡು ಕಾಂಗ್ರೆಸ್ಸಿಗೆ ವೋಟ್ ಹಾಕಿ. ಬಾಂಬೆ ನೋಟು, ಮಂಜುನಾಥ್ಗೆ ವೋಟೆಂದು ಘೋಷಣೆ ಕೂಗಿದರು.
ದನ ಕುರಿ ಕೋಳಿ ಮಾರಾಟದಂತೆ 17 ಮಂದಿ ಅನರ್ಹ ಶಾಸಕರೇ ಬಿಜೆಪಿ ಮಾರಾಟವಾಗಿದ್ದಾರೆ. ವಿಶ್ವನಾಥ್ ಕಾಂಗ್ರೆಸ್ಸಿನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದರು. ವಯಸ್ಸಾದಾಗ ಬಿಜಿಪಿಗೆ ಹೋಗಿ ಯಡಿಯೂರಪ್ಪನ ಜೊತೆ ಸೇರಿಕೊಂಡರು ಎಂದು ವ್ಯಂಗ್ಯವಾಡಿದರು.
ಹೌದಾ..? ಯಡಿಯೂರಪ್ಪ ಬಳಿ ಟನ್ಗಟ್ಟಲೆ ಹಣವಿದೆಯಂತೆ,..!
Date: