ಕ್ರಿಕೆಟ್ ಲೋಕದ ಮಾಂತ್ರಿಕ ಕೋಟ್ಯಾಂತರ ಅಭಿಮಾನಿಗಳನ್ನು ತನ್ನ ಆಟದಿಂದ ಗಳಿಸಿಕೊಂಡ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗು ಅವರ ತಂಡ ಪಿಂಕ್ ಬಾಲ್ ಟೆಸ್ಟ್ ವಿಶ್ವದ ಎಲ್ಲಾ ಕ್ರಿಕೆಟ್ ತಂಡಗಳೂ ಆಡಿರುವಾಗ ತಾವೇಕೆ ಹಿಂದೆ ಬೀಳಬೇಕೆಂದು ಇದೂ ಒಂದು ಪ್ರಯೋಗ ಆಗಿ ಬಿಡಲಿ ಎಂದು ವಿರಾಟ್ ಪಡೆ ಬಾಂಗ್ಲಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಆಡಿತ್ತು.
ಆದರೆ ಆ ಪಂದ್ಯಕ್ಕೆ ಸಿಕ್ಕ ಯಶಸ್ಸಿನಿಂದ ಉಬ್ಬಿಹೋಗಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರು ಪಿಂಕ್ ಬಾಲ್ ಟೆಸ್ಟ್ ಪ್ರತೀ ಸರಣಿಯಲ್ಲೂ ಒಂದು ಪಂದ್ಯವನ್ನು ಹಗಲು ರಾತ್ರಿ ಆಡುವಂತೆ ಟೀಂ ಇಂಡಿಯಾಕ್ಕೆ ಮನವಿ ಮಾಡಿದ್ದಾರಂತೆ ಇದಕ್ಕೆ ಟೀಂ ಇಂಡಿಯಾ ಏನು ಹೇಳಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ .