ಹಾಸನ : ಮಹಿಳೆಯೊಬ್ಬಳು ಸರಸವಾಡುವಾಗಲೇ ಜಗಳವಾಡಿ ಬೆತ್ತಲೆಯಿದ್ದ ಪ್ರಿಯಕರನನ್ನು ಕೊಲೆಗೈದು ಆಕೆಯೂ ಬೆತ್ತಲಾಗಿಯೇ ಓಡಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಆರೋಪಿ ಮಹಿಳೆ ಬೆತ್ತಲಾಗಿ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡಿಸೆಂಬರ್ 1ರ ರಾತ್ರಿ ಹೊಳೆನರಸೀಪುರದ ಮಳಿಗೆ ಆವರಣದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಪೆÇಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲೂಕಿನ ಬಸವಾಪಟ್ಟಣ ನಿವಾಸಿ ಮಂಜು (43) ಮೃತ ದುರ್ದೈವಿ. ಹೊಳೆನರಸೀಪುರದ ವಸಂತಾ ಆರೋಪಿ.
ವಸಂತಾ ಹಾಗೂ ಮಂಜು ನಡುವೆ ಅನೈತಿಕ ಸಂಬಂಧವಿತ್ತು. ರಾತ್ರಿ ಒಟ್ಟಿಗೇ ಇಬ್ಬರು ಕುಡಿದು, ತಿಂದು ಸರಸದಲ್ಲಿ ತೊಡಗಿದ್ದರು. ಇಬ್ಬರು ಬೆತ್ತಲಾಗಿಯೇ ಬಡಿದಾಡಿಕೊಂಡಿದ್ದು, ವಸಂತಾ ದೊಣ್ಣೆಯಿಂದ ಮಂಜು ತಲೆಗೆ ಹೊಡೆದು ಬೆತ್ತಲಾಗಿ ಸುತ್ತಿದ್ದಾಳೆ.
ಪುರಸಭೆ ಮಳಿಗೆ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಸ್ಥಳೀಯ ಸಿಸಿಟಿವಿ ದೃಶ್ಯ, ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.