ಉಪಚುನಾವಣೆ ಫಲಿತಾಂಶದ ಬಳಿಕ ಎಲ್ಲ ಚರ್ಚೆಗಳು ನಡೆಯಲಿದ್ದು, ಅದರ ಪಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನೆಡೆ ಏನು ಎಂದು ಹಾಗು ಮೈತ್ರಿ, ದಲಿತ ಸಿಎಂ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಚರ್ಚೆ ಅಥವಾ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಮೊದಲಿಗೆ ನಾವು 10 ಸ್ಥಾನಗಳನ್ನು ಗೆಲ್ಲಬೇಕು. ಜೆಡಿಎಸ್ ಒಂದೂ ಅಥವಾ ಎರಡು ಸ್ಥಾನಗಳನ್ನು ಗೆದ್ದರೆ ಮಾತ್ರ ಮೈತ್ರಿ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ 5 ಸ್ಥಾನ ಗೆದ್ದರೂ, ಬಿಎಸ್ಪಿ ಶಾಸಕ ಸೇರಿ 112 ಸಂಖ್ಯಾಬಲ ಆಗಲಿದೆ ನಂತರ ಏನು ಎಂದು ಚರ್ಚೆಮಾಡಬೇಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು