ಪತಿ -ಪತ್ನಿ ಸಂಬಂಧ ಎರಡು ದೇಹ ಒಂದು ಜೀವ ಎಂಬಂತೆ. ದಾಂಪತ್ಯದ ಅನುಭವಗಳು ಬದುಕನ್ನೇ ಬದಲಿಸಿ ಬಿಡುತ್ತವೆ. ದಾಂಪತ್ಯದ ಸುಖ, ಖುಷಿ ಬದುಕಿಗೆ ಪಾಸಿಟೀವ್ ಎನರ್ಜಿಯಾದರೆ, ವಿರಸ, ದಿನಂಪ್ರತಿ ನಡೆಯುವ ಜಗಳ ಬದುಕನ್ನು ಹಾಳುಗೆಡವಲುಬಹುದು. ಗಂಡ – ಹೆಂಡತಿ ಎಂದಾದಾಗ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಪತ್ನಿಗೆ ಪತಿ ನೆರವಾದರೆ ದಾಂಪತ್ಯ ಜೀವನ ಸದಾ ಲವಲವಿಕೆಯಿಂದ ಇರುತ್ತೆ. ಇಲ್ಲೊಬ್ಬ ಪತಿ ಹೀಗೂ ಪತ್ನಿಯ ಸೇವೆ ಮಾಡಿ ಹೀರೋ ಆಗಿದ್ದಾನೆ.
ವೈದ್ಯಕೀಯ ತಪಾಸಣೆಗೆಂದು ಕಾದು ಕಾದು ಸುಸ್ತಾದ ಗರ್ಭಿಣಿ ಪತ್ನಿಗಾಗಿ ಪತಿ ಕುರ್ಚಿಯಾದ ಅಪರೂಪದ ಪ್ರಸಂಗವೊಂದು ಚೀನಾದಲ್ಲಿ ನಡೆದಿದೆ.
ಚೆಕಪ್ ಗಾಗಿ ಆಸ್ಪತ್ರೆಗೆ ಹೋಗಿದ್ದಾಗ ನಿಂತೂ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಪತಿಯೊಬ್ಬರು ಕುರ್ಚಿಯಾದ ಅಪರೂಪದ ಸಂಗತಿಯೊಂದು ಚೀನಾದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಚೆಕಪ್ಪಿಗೆಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ನಿಂತು ನಿಂತು ಸುಸ್ತಾಗಿದ್ದಾರೆ. ಆಗ ಕೂರಲು ಕುರ್ಚಿ ಇಲ್ಲದೆ ಪತಿ ತಾನೇ ಕುರ್ಚಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.