ದೇಶದ ಜನರು ಉಪಚುನಾವಣೆ ಫಲಿತಾಂಶಕ್ಕೆ ಕಾಯುತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ಬರುತ್ತೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗಬಹುದು. ಮೈತ್ರಿ ಸರಕಾರದ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಜನರು ರೋಸಿ ಹೋಗಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಆಡಳಿತದಲ್ಲಿರುವ ಯಡಿಯೂರಪ್ಪ ಸರಕಾರವನ್ನು ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಹೊಸ ಹಾದಿ- ಹೊಸ ಹೆಜ್ಜೆ ಇಡುವ ಸರಕಾರ ಬರಲಿದೆ. ನೂರಕ್ಕೆ ನೂರು ನಮಗೆ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಸಿಗಲಿದೆ. ಈಗ ಬಂದಿರುವ ಸಮೀಕ್ಷೆಗಳೆಲ್ಲವೂ ಇದನ್ನೇ ಹೇಳುತ್ತಿವೆ. ನನ್ನನ್ನು ಕೇಳಿದರೆ ಬಿಜೆಪಿ 14ರಿಂದ 15 ಸ್ಥಾನ ಗೆಲ್ಲಲಿದೆ ಎಂದು ಅಶೋಕ್ ತಿಳಿಸಿದರು.