ಉಪಚುನಾವಣೆ ನೆಡೆಯಲು ಹಾಗು ಬಿಜೆಪಿ ಸರ್ಕಾರ ರಚನೆ ಆಗಲು ಪ್ರಮುಖ ಕಾರಣಕರ್ತರೆಂದರೆ ಅದು ರಮೇಶ್ ಜಾರಕಿಹೊಳಿ ಅವರು ಇದೀಗ ಅವರು ಬಿಜೆಪಿಗೆ ಸೇರಿ ಉಪಚುನಾವಣೆಯಲ್ಲಿ ಗೆಲವು ಕೂಡ ಸಾಧಿಸಿದ್ದಾರೆ. ಆದರೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗುವ ಭರವಸೆ ಹೊಂದಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಆ ಸ್ಥಾನ ಸಿಗುವುದು ಡೌಟ್ ಎಂದು ಹೇಳಲಾಗಿದೆ.
ಈಗಾಗಲೇ ಮೂವರು ಉಪ ಮುಖ್ಯಮಂತ್ರಿಗಳಿದ್ದು, ಇದರ ಜೊತೆಗೆ ಮತ್ತೊಂದು ಹುದ್ದೆ ಕಲ್ಪಿಸುವುದಕ್ಕೆ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಇದರಿಂದ ಗೊಂದಲದಲ್ಲಿರುವ ಸಿಎಂ ಯಡಿಯೂರಪ್ಪ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ . ಇದರ ಮದ್ಯೆ ಸೋತ ಅನರ್ಹ ಶಾಸಕರಿಗು ಮಂತ್ರಿ ಸ್ಥಾನ ಕೊಡಬೇಕೆಂದು ಬೇಡಿಕೆ ಕೂಡ ಯಡಿಯೂರಪ್ಪ ಅವರ ಬಳಿ ಬಂದಿದೆ ಇದಕ್ಕೆಲ್ಲ ಅವರೇ ಉತ್ತರ ನೀಡಬೇಕಿದೆ .