ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಎಸ್.ಟಿ.ಸೋಮಶೇಖರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರೂ ಆ ನಂತರ ಮಾತನಾಡಿದ ಅವರು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ. ಪರಸ್ಪರ ಸಹಕಾರದಿಂದ ಇರುತ್ತೇವೆ ಎಂದು ತಿಳಿಸಿದರು. ನಮಗೆ ಇದೇ ಖಾತೆ ಬೇಕು ಎನ್ನುವುದಾಗಲಿ,
ಇಂತಹದ್ದೇ ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಮುಖ್ಯಮಂತ್ರಿಯವರಿಗೆ ಒತ್ತಡ ಹಾಕಿಲ್ಲ. ನಮಗೆ ಅವರ ಬಗ್ಗೆ ನಂಬಿಕೆ ಇದೆ. ಕೊಟ್ಟ ಮಾತನ್ನು ನಡೆಸಿಕೊಳ್ಳುತ್ತಾರೆ ಎಂದು ನಂಬಿಕೆ ಇದೆ ಅವರು ಯಾವ ಖಾತೆ ಕೊಟ್ಟರೂ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳನ್ಬು ಮಾಡುತ್ತೇನೆ ಎಂದು ಯಡಿಯೂರಪ್ಪ ಅವರ ಪರ ಸೋಮಶೇಖರ್ ಅವರು ಹೇಳಿಕೆ ನೀಡಿದ್ದಾರೆ .