ಸಣ್ಣ-ಪುಟ್ಟ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗುವುದನ್ನು ನೀವು ದಿನಂಪ್ರತಿ ನೋಡುತ್ತಲೇ ಇರುತ್ತೀರಿ. ಕೊಡಗಲ್ಲಿ ಬಜ್ಜಿ ಕೊಳ್ಳುವಾಗ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ.
ಹೌದು ಬಜ್ಜಿ ತೆಗೆದುಕೊಳ್ಳುವಾಗ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳಸ ಕೊಲೆಯಲ್ಲೊ ಅಂತ್ಯವಾಗಿರುವ ಘಟನೆ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿ ಮಹದೇವ ನಾಯಕ್ ಕೊಲೆಯಾದವರು. ಈತ ಮದ್ಯ ಸೇವಿಸಿ, ಬಾರ್ ಮುಂದಿನ ಬಜ್ಜಿ ಅಂಗಡಿಯ ಮಹಿಳೆಯೊಡನೆ ಜಗಳವಾಡಿದ್ದು, ಈ ವೇಳೆ ಅಲ್ಲಿಗೆ ಬಂದ ಇಬ್ಬರು ಯುವಕರು ಮಹದೇವ್ ನಾಯಕಗೆ ಥಳಿಸಿದ್ದಾರೆನ್ನಲಾಗಿದೆ. ಹಲ್ಲೆಗೊಳಗಾದ ಮಹದೇವ್ ಗಂಭೀರ ಗಾಯಗೊಂಡಿದ್ದು,

ಮಂಗಳೂರು ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲ್ಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲುಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವಕುಮಾರ್ ಮತ್ತು ಸಂತೋಷ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.






