ವೆಲ್ ಬಿಹೇವ್ಡ್ ವುಮೆನ್ ಸೆಲ್ಡೊಮ್ ಮೇಕ್ ಹಿಸ್ಟರಿ. ಹಾರ್ವಡ್ ಯೂನಿವರ್ಸಿಟಿಯ ಪ್ರೊಪೆಸರ್ ಲಾರೆಲ್ ತಾಚರ್ ಅಲ್ರಿಚ್ ಹೇಳಿದ ಮಾತಿದು. ನಿಜ, ತುಂಬಾ ಸಭ್ಯಳಾದ ಹೆಣ್ಣು, ಮಾನ ಮರ್ಯಾದೆ ಅಂತ ಅಂಜುತ್ತಲೇ ಬದುಕುವ ಹೆಣ್ಣು ತೀರಾ ವಿರಳವಾಗಿ ಹಿಸ್ಟರಿಯನ್ನು ಸೃಷ್ಟಿಸುತ್ತಾಳೆ. ಅಸಲಿಗೆ ಅವಳೇ ಈ ಕ್ರೂರ ವ್ಯವಸ್ಥೆಯ ಮೊದಲ ಬಲಿಪಶು.
ಆದರೆ ಅದೇ ವ್ಯವಸ್ಥೆಗೆ ಸಡ್ಡು ಹೊಡೆದು ನಿಲ್ಲುವ ಹೆಣ್ಣು ಮಗಳಿದ್ದಾಳಲ್ಲ, ಅವಳಿಗೆ ಅದೆಷ್ಟೇ ಸಲಾಂ ಹೊಡೆದ್ರು ಸಾಕಾಗುವುದಿಲ್ಲ. ಜಗತ್ತಿನ ವಿಚಾರವನ್ನ ವಿಶ್ಲೇಷಣೆ ಮಾಡುವುದಕ್ಕಿಂತ ನಮ್ಮ ದೇಶದ ಸಂಗತಿಯನ್ನೇ ತೆಗೆದುಕೊಂಡರೇ, ಬ್ರಿಟೀಷರ ವಿರುದ್ಧ ಅಬ್ಬರಿಸಿದ ಕಿತ್ತೂರು ರಾಣಿ ಚೆನ್ನಮ್ಮ, ಹೈದ್ರಾಲಿಯ ಸೈನ್ಯವನ್ನ ಹಿಮ್ಮೆಟ್ಟಿಸಿದ ಒನಕೆ ಓಬವ್ವರಿಂದ ಹಿಡಿದು, ಅಮೇರಿಕಾದಂತ ಅಮೇರಿಕಾವನ್ನೇ ಡೋಂಟ್ ಕೇರ್ ಅಂದಿದ್ದ ಇಂದಿರಾಗಾಂಧಿಯವರೆಗೆ ಅಸಂಖ್ಯಾ ಧೀರ ಮಹಿಳೆಯರನ್ನು ನಾವು ನೋಡಿದ್ದೇವೆ. ಎಕ್ಸಾಟ್ಲಿ.. ಹೆಣ್ಣು ಸಹನೆಯುಳ್ಳವಳು. ಅವಳು ಮಮತೆಯನ್ನೇ ರಕ್ತ ಮಾಡಿಕೊಂಡವಳು, ಅವಳು ಕ್ಷಮಯಾಧರಿತ್ರಿ. ಆದರೆ ಅದೊಮ್ಮೆ ಅವಳು ತಿರುಗಿ ಬಿದ್ದಾಳೆನ್ನಿ ತಡೆಯಲು ಗಂಡಸೆಂಬ ಗಂಡಸು ಮರುಹುಟ್ಟು ಪಡೆದು ಬರಲೇಬೇಕು. ಹೆಣ್ಣು ಬಹುಬೇಗ ಕ್ಷಮಿಸಿಬಿಡ್ತಾಳೆ, ಆದರೆ ಸಾಯುವವರೆಗೆ ಕೆಲವೊಂದು ಸಂಗತಿಗಳನ್ನು ಮರೆಯುವುದಿಲ್ಲ.
ಅವಳು ತನ್ನ ಪಾಡಿಗೆ ತಾನಿರುತ್ತಾಳೆ, ಒಂದೊಮ್ಮೆ ಕೆಣಕಿದರೂ ಸಹಿಸಿಕೊಂಡಿರುತ್ತಾಳೆ. ಆದರೆ ಪದೇಪದೇ ಕಾಡಿದರೇ ಮಾತ್ರ ಅಕ್ಷರಶಃ ದಹಿಸಿಬಿಡ್ತಾಳೆ. ಎಲ್ಲಿ, ಏನು, ಯಾವ್ ಜಾಗ, ಏನ್ ಕಥೆ ಯಾವುದನ್ನೂ ನೋಡುವುದಿಲ್ಲ. ಚಪ್ಪಲಿ ಕಿತ್ತುಹೋಗುವಂತೆ ಹೊಡೆಯುತ್ತಿರುತ್ತಾಳೆ. ಇದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಘಟನೆ. ಬೆಂಗಳೂರು ಮೂಲದ ಯುವತಿ ಅದೊಂದು ದಿನ ತನ್ನ ಪೋಷಕರೊಂದಿಗೆ ಶ್ರೀರಂಗಪಟ್ಟಣಕ್ಕೆ ಪ್ರವಾಸಕ್ಕೆ ಬಂದಿದ್ದಳು. ನದಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಬಟ್ಟೆ ಬದಲಾಯಿಸಿಕೊಳ್ಳಲು ಸ್ನಾನ ಗೃಹದ ಕಡೆ ಬಂದಿದ್ದಾಳೆ. ಆಗ ಅಪರಿಚಿತ ಯುವಕನೊಬ್ಬ ತನ್ನ ಮೊಬೈಲ್ನಿಂದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಇದನ್ನು ಅಚಾನಕ್ಕಾಗಿ ಗಮನಿಸಿದ ಯುವತಿ ಸ್ಥಳೀಯರ ಸಹಕಾರದಿಂದ ಅವನನ್ನು ಹಿಡಿದು, ಲಗೋರಿ, ಗೋಲಿ, ಚಿನ್ನಿದಾಂಡು ಎಲ್ಲವನ್ನು ಆಡಿಬಿಟ್ಟಿದ್ದಾಳೆ. ಒದೆ ತಿಂದವ್ನು ಎದ್ದೇ ಬಿದ್ದೇ ಅಂತ ಒಡಿಹೋಗಿದ್ದ. ಹಾಗಾಗಿ ಅವನ ವಿಳಾಸ, ಹಿಸ್ಟರಿ ಯಾವುದೂ ಸ್ಪಷ್ಟವಾಗಿಲ್ಲ. ಒಂದಂತೂ ನಿಜವಾಗಿತ್ತು. ಹೆಣ್ಣು ಒಲಿದರೇ ನಾರಿ ಮುನಿದರೇ ಮಾರಿ. ವೆಲ್ ಬಿಹೇವ್ಡ್ ವುಮೆನ್ ಸೆಲ್ಡೊಮ್ ಮೇಕ್ ಹಿಸ್ಟರಿ.
ಬಹುಶಃ ಕೆಲವೊಂದು ಘಟನೆಗಳ ಮೆಲುಕಿಗೆ ಕಾರಣ ಇತ್ತೀಚೆಗೆ ನಾಗಲ್ಯಾಂಡ್ನಲ್ಲಿ ಅತ್ಯಾಚಾರದ ಆರೋಪಿಯನ್ನು ಜೈಲಿಗೆ ನುಗ್ಗಿ ಹೊರಗೆಳೆದು ತಂದು ಬಡಿದು ಕೊಂದ ವೈಖರಿ. ಅಲ್ಲಿ ಸೇರಿದ್ದ ಮೂರ್ನಾಲ್ಕು ಸಾವಿರ ಜನರ ಆಕ್ರೋಶದ ಮುಂದೆ ಆ ಅತ್ಯಾಚಾರಿ ಬದುಕಲು ಸಾಧ್ಯವೇ ಇರಲಿಲ್ಲ. ನಾಗಲ್ಯಾಂಡ್ನ ಧಿಮಾಪುರ್ನಲ್ಲಿ ಸಯ್ಯದ್ ಫರೀದ್ ಖಾನ್ ಎಂಬಾತ ನಾಗ ಕನ್ಯೆಯನ್ನು ಅತ್ಯಾಚಾರ ಮಾಡಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದ. ಅದಾದ ಎರಡು ದಿನಕ್ಕೆ ನಾಗ ಸಮುದಾಯಕ್ಕೆ ಸೇರಿದ ನಾಲ್ಕು ಸಾವಿರ ಜನರು ಫರೀದ್ ಖಾನ್ ನನ್ನು ಅವರ ಕೈಗೆ ಒಪ್ಪಿಸುವಂತೆ ಪ್ರತಿಭಟನೆ ನಡೆಸಿದರು. ಅವತ್ತಷ್ಟೆ ಅಲ್ಲಿನ ಸರ್ಕಾರ ನಿಷೇಧಾಜ್ಞೆಯನ್ನು ವಾಪಸು ತೆಗೆದುಕೊಂಡಿತ್ತು. ಅದನ್ನೇ ಕಾಯುತ್ತಿದ್ದ ಜನರು ಜೈಲಿಗೆ ನುಗ್ಗಿದವರೇ ಫರೀದ್ ಖಾನ್ ನನ್ನು ಹೊರಗೆಳೆದು ಯಾವ ಪರಿ ಹೊಡೆದರೆಂದರೇ, ಫರೀದ್ ಬೆತ್ತಲಾಗಿ ಕಂಬಕ್ಕೆ ಕಟ್ಟಿದಂತೆ ಸತ್ತುಹೋಗಿದ್ದ. ಜನರ ಆಕ್ರೋಶಕ್ಕೆ ಸಾಕ್ಷಿಯಾಗಿ ಸತ್ತುಬಿದ್ದಿದ್ದ. ಅತ್ಯಾಚಾರಿಗೆ ಸರಿಯಾದ ಶಿಕ್ಷೆಯಿದು ಅಂತನಿಸಿದರೂ ಕಾನೂನು ಮೀರಿದ್ದರಿಂದ ಈ ಕೇಸಿಗೆ ಸಂಬಂಧಿಸಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.
ಅದೇನೇ ಇದ್ದರೂ ಇಡೀ ದೇಶವೇ ನಾಗಲ್ಯಾಂಡ್ ಜನರ ಕೆಲಸಕ್ಕೆ ಶಬ್ಬಾಸ್ ಎಂದಿದೆ. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಕ್ಕೆ ಇದೇ ಸರಿಯಾದ ಶಿಕ್ಷೆ ಎನ್ನಲಾಗುತ್ತಿದೆ. ದಿನಕ್ಕೆ ನೂರಾರು ಅತ್ಯಾಚಾರ, ಶೋಷಣೆಗಳನ್ನು ಯಾವ ವ್ಯವಸ್ಥೆ ತಾನೆ ಸಹಿಸಿಕೊಳ್ಳುತ್ತದೆ. ನಿರ್ಭಯ ಅತ್ಯಾಚಾರದ ನಂತರ ಪ್ರಜ್ಞಾವಂತರು ಸಿಟ್ಟಾಗಿದ್ದಾರೆ ಎನ್ನುವುದು ಸಾಬೀತಾಗಿತ್ತು. ನಾಗಲ್ಯಾಂಡ್ನಲ್ಲಿ ನಡೆದದ್ದು ಒಟ್ಟಾರೆ ವ್ಯವಸ್ಥೆಯ ಆಕ್ರೋಶವಾದರೇ, ದೇಶದ ಕೆಲವು ಕಡೆ ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಕಾನ್ಸೆಪ್ಟ್ ನಡೆಯುತ್ತಿವೆ. ಕೆಣಕಿದವರಿಗೆ ಕೆರ ಕಿತ್ತು ಹೋಗುವಂತೆ ಹೊಡೆಯುತ್ತಿದ್ದಾರೆ. ಇದರಿಂದ ಪುಂಡ ಪ್ರಪಂಚಕ್ಕೆ ಹೆಣ್ಣು ಸಾಮಾನ್ಯಳಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ.
ಅವಳು ಆರತಿ ಯಾದವ್. ಅಲಹಬಾದ್ನ ಯುವತಿ. ಪೋಕ್ರಿಯೊಬ್ಬ ಅವಳಿಗೆ ಲೈಂಗಿಕವಾಗಿ ಕಾಡುತ್ತಿದ್ದ. ಅವನ ಕಾಟಕ್ಕೆ ಬೇಸತ್ತು ಅವನ ಮನೆಗೆ ಬಂದ್ರೆ ಅಸಾಮಿ ಪತ್ತೆಯಿಲ್ಲ. ಅಗ ಮನೆ ಎದುರಿಗೆ ನಿಲ್ಲಿಸಿದ್ದ ಬೈಕ್ ಕಾಣಿಸಿದೆ. ಪೆಟ್ರೋಲ್ ಟ್ಯಾಂಕ್ ಪೈಪ್ ಹೊರಗೆ ತೆಗೆದವಳೇ ಅನಾಮತ್ತಾಗಿ ಬೆಂಕಿ ಹಚ್ಚಿಯೇಬಿಟ್ಟಳು. ಅವಳ ಆಕ್ರೋಶ ಬೆಂಕಿಯಂತೆ ಉರಿದಿತ್ತು.
ಅವನೊಬ್ಬ ಅಪಾಪೋಲಿ. ಇವ್ನಿಗೆ ಹೆಣ್ಣುಮಕ್ಕಳ ಮೊಬೈಲ್ ನಂಬರ್ ಸಂಗ್ರಹಿಸಿ ಅವರ ಜೊತೆ ದೋಸ್ತಿ ಮಾಡಿಕೊಳ್ಳುವ ಚಾಳಿ. ಆ ಮೂಲಕ ತನ್ನ ಲೈಂಗಿಕ ಚಟವನ್ನು ಈಡೇರಿಸಿಕೊಳ್ಳುವ ಹುನ್ನಾರ. ಬೋಪಾಲ್ ನ ಯುವತಿಯೊಬ್ಬಳಿಗೂ ಇದೇ ತೆರನಾಗಿ ಲೈಂಗಿಕ ಶೋಷಣೆ ಮಾಡುತ್ತಿದ್ದ. ಅವನ ಕಾಟದಿಂದ ಬೇಸತ್ತ ಯುವತಿ, ಅವನನ್ನು ಮೀಟ್ ಆಗಬೇಕೆಂದು ಇಂಗಿತ ವ್ಯಕ್ತಪಡಿಸಿದಳು. ಖುಷಿಯಾದ ಹೋರಿ, ಅಲ್ಲೇ ಪಾರ್ಕ್ ಗೆ ಬರಲು ಹೇಳಿದ್ದ. ಕುಟುಂಬ ಸಮೇತ ಅಲ್ಲಿಗೆ ಎಂಟ್ರಿ ಕೊಟ್ಟ ಅ ಯುವತಿ, ಅವನನ್ನು ಹಿಡ್ಕೊಂಡು ಬಡಿದ್ಲು ನೋಡಿ. ಮಗನ ಗೋಳು ಕೇಳೋರು ಯಾರು..? ಆಮೇಲೆ ಅಲ್ಲಿಂದ ಓಡಲು ಪ್ರಯತ್ನಿಸಿದ. ಪೊಲೀಸರು ಎರಡು ತದುಕಿ ತಮ್ಮ ಮನೆಗೆ ಕರ್ಕೊಂಡು ಹೋದ್ರು..!
ಕೆಂಪು ಟೀ ಷರ್ಟ್ ಧರಿಸಿದ ಯುವಕನನ್ನು ನೆಲಕ್ಕೆ ಕೆಡವಿಕೊಂಡು ಕಾಲಿಗೆ ಕೆಲಸ ಕೊಟ್ಟವಳು ನಟಿ ಕತ್ರಿನಾ ಕೈಫ್. ಶೂಟಿಂಗ್ ವೇಳೆ ಛೇಡಿಸಿದ ಯುವಕನನ್ನು ಕೆಡವಿಕೊಂಡು ಯಾವ ಪರಿ ಬಡಿದಳೆಂದ್ರೇ ಅವನು ಜಪ್ಪಯ್ಯ ಅಂದ್ರೂ ಆಕೆ ಮಾತ್ರ ಬಿಡಲು ತಯಾರಿರಲಿಲ್ಲ. ಬೇಕಾಬಿಟ್ಟಿ ರುಬ್ಬಿ ಹಾಕಿದ್ದಳು. ಆಸಾಮಿ ಗೊಳೋ ಅಂದರೂ ಬಿಡಲಿಲ್ಲ ಕತ್ರವ್ವ. ಆಮೇಲೆ ನಟ ಇಮ್ರಾನ್ ಖಾನ್ ಬಂದು ಅವಳನ್ನು ಸಮಾಧಾನಪಡಿಸಿದ್ದ. ಇಲ್ಲ ಅಂದಿದ್ರೇ ಒದ್ದು ಒದ್ದೇ ಅವನನ್ನು ಅರೆಜೀವ ಮಾಡಿಬಿಡುತ್ತಿದ್ದಳು. ಪುಣ್ಯ ಹಾಗಾಗಲಿಲ್ಲ. ಅದ್ರೆ ಲೈಫ್ ಲಾಂಗ್ ಕತ್ರಿನಾ ಕೈಫ್ ನ ನೋಡುವಾಗೆಲ್ಲ ಈ ಯುವಕ ಬೆಚ್ಚಿಬೀಳುವುದಂತೂ ಖಾತ್ರಿ.
ಈ ಮುದುಕಪ್ಪನ ಕತೆ ಕೊಂಚ ಡಿಫ್ರೆಂಟು. ಇವ್ನು ಆಗಾಗ್ಗೆ ಆಂಟಿಯರನ್ನು ಕಂಡಾಗೆಲ್ಲ ಪ್ರೀತ್ಸೆ ಪ್ರೀತ್ಸೆ ಅಂತಿದ್ದ. ಐ ಲವ್ ಯೂ ಅಂತಿದ್ದ. ಆದರೆ ಕಡೆಗೂ ಅವನ ಆಟೋಟೋಪಗಳಿಗೆ ಕಡಿವಾಣ ಹಾಕುವ ಕಾಲ ಬಂದಿತ್ತು. ಎಲ್ಲಾ ಸೇರಿ ಅವನನ್ನು ರುಬ್ಬುಗುಂಡು ಮಾಡಿಬಿಟ್ರು. ಇನ್ನು ಕಾಲೇಜು ಹುಡ್ಗೀಯ ಸಿಟ್ಟಿನ ಪರಮಾವಧಿ ನೋಡಿ. ಅವರೆಲ್ಲ ಅಪರಿಚಿತರಲ್ಲ, ಪರಿಚಿತರೇ. ಅದರಲ್ಲೊಬ್ಬ ಯುವಕ ಅವಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ನಂತೆ. ಅದಕ್ಕೆ ಅವಳು ಬಾರಿಸು ಮುಷ್ಟೀಲಿ ಡಿಂಡಿಮವ ಮಾಡಿದಳು ಅಷ್ಟೆ.
ಅವನ ಹೆಸರು ಬರ್ಕಾತುಲ್ಲ. ಇದು ಬರ್ಕತುಲ್ಲನಾ ಮತ್ತೊಂದು ವರಸೆ. ಇವ್ನಿಗೆ ದಿನದ ಇಪ್ಪತ್ನಾಲ್ಕು ಘಂಟೆಯೂ ಕುಡಿಯುವ ಚಾಳಿ. ತೀರಾ ಪಂಕ್ಚರ್ ಹಾಕೋ ಸಲೂಷನ್ ಗಳನ್ನ ಕಿಕ್ಕೇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ. ಆಯ್ತು ಕುಡಿದು ಸುಮ್ಮನೇ ಇರ್ತಾನಾ..? ಈ ಬರ್ಕಾತುಲ್ಲಾ ಕುಡಿದು ಟೈಟಾದ್ರೇ ಸಾಕು, ಹೆಂಗಸರಿಗೆ ಕಿರುಕುಳ ಕೊಡ್ತಿದ್ದ. ಒಂದಿಬ್ಬರು ಹೆಂಗಸರಿಗೆ ಬಡಿದಿದ್ದ. ಹಾಗಾಗಿ ಆ ಏರಿಯಾದ ಹೆಂಗಸರೆಲ್ಲ ಸೇರಿಕೊಂಡು ಅವನ ಮಂಗಾಟಕ್ಕೆ ಬ್ರೇಕ್ ಹಾಕಿದ್ದರು. ಅವರ ಹೊಡೆತಕ್ಕೆ ಅವನು ಜೀವಿತದಲ್ಲಿ ಕಿಕ್ಕೇರಿಸಿಕೊಳ್ಳದಂತಾಗಿತ್ತು. .
ಈ ಥರ ಅನೇಕ ಘಟನೆಗಳಿವೆ. ನಾರಿ ಮುನಿದಾಗೆಲ್ಲ ಮಾರಿಯಾಗಿದ್ದಾಳೆ. ಹೆಣ್ಮಕ್ಕಳು ಈ ಪರಿ ಸ್ಟ್ರಾಂಗ್ ಆಗುವುದಕ್ಕೆ ಈ ವ್ಯವಸ್ಥೆಯ ಕೆಲ ಕಿರಾತಕರು ಕಾರಣ. ಅವಳನ್ನು ಪೂಜಿಸಿ ಗೌರವಿಸಿದ್ರೇ ಅವಳು ತಾಯಿಯಂತೆ ಭಾಸವಾಗುತ್ತಾಳೆ. ಎಲ್ಲವನ್ನೂ ಹಾಳು ಮಾಡಿದ್ದು ಈ ಗಂಡಸು. ಅನುಭವಿಸಲೇಬೇಕು. ಅದವನ ಹಣೆಬರಹ.
POPULAR STORIES :
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?