ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!

0
89

ಈ ನಿದ್ರಾಹೀನತೆ ಬಹುತೇಕ ಮಂದಿಗೆ ಜೀವಹಿಂಡೋ ಕಾಯಿಲೆ. ದಿನವಿಡೀ ದಣಿದ ದೇಹ, ಆಯಾಸಗೊಂಡು ಜರ್ಜರಿತವಾದ ಮನಸು ಬೇಡೋದು ಸುಖನಿದ್ದೆಯನ್ನು. ಈ ನಿದ್ದೆ ಅಮೂಲ್ಯ ವರ. ಬೆಚ್ಚಗೆ ರಗ್ಗು ಹೊದ್ದು, ಕನಸಿನ ಗುಂಗಿನಲ್ಲಿ ಸಕ್ರೆ ನಿದ್ದೆನಾ ಪ್ರತಿಯೊಬ್ಬರ ಮನಸು ಬಯಸುತ್ತಿರುತ್ತೆ. ಆದ್ರೆ ಏನ್ಮಾಡೋದು ಕೆಲವರು ಪಾಲಿಗೆ ಈ ನಿದ್ದೆ ಅನ್ನೋದು ಮರೀಚಿಕೆ. ದೂರದ ಕನಸು.
ರಾತ್ರಿಯಿಡಿ ಮುಗ್ಗಲು ಬದಲಿಸಿ ನಿದ್ದೆಗಾಗಿ ಹಪಾಹಪಿಸಿದ್ರೂ ನಿದ್ರಾದೇವಿ ಸುಳಿಯೋದೆ ಇಲ್ಲ. ದಣಿದ ದೇಹಕ್ಕೆ ನಿದ್ದೆ ಗಗನಕುಸುಮವಾದ್ರೆ ಆ ಪಾಡು ಯಾರಿಗೂ ಬೇಡ ಅನಿಸಿಬಿಡುತ್ತೆ. ಯಾಕೆಂದ್ರೆ ಮನುಷ್ಯನಿಗೆ ಊಟ, ತಿಂಡಿಯಷ್ಟೇ ಮುಖ್ಯ ಈ ನಿದ್ದೆ. ಮನುಷ್ಯನ ಬೆಳವಣಿಗೆಗೆ ಈ ನಿದ್ದೆಯೂ ಪೂರಕ. ಉತ್ತಮ ಆರೋಗ್ಯ ಕಾಪಾಡಿಕೊಳ್ಳೋಕೆ ಕನಿಷ್ಟ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಆದ್ರೆ ಇಂದಿನ ಬ್ಯುಸಿ ಲೈಫ್ ನಲ್ಲಿ ಅಷ್ಟು ಈಸಿಯಾಗಿ ನಿದ್ದೆ ಮಾಡಲು ಹಲವು ಜನ ಪರದಾಡುತ್ತಿದ್ದಾರೆ. ಅಂದಹಾಗೆ ಈ ನಿದ್ರಾಹೀನತೆಗೆ ಮುಖ್ಯ ಕಾರಣ ಒತ್ತಡದ ಬದುಕು. ಫಾಸ್ಟ್ ಲೈಫ್ಗೆ ಹೊಂದಿಕೊಳ್ಳಲು ಆಗದ ತಳಮಳ, ಗೊಂದಲದ ಗೂಡಾಗಿರುವ ಮನಸು. ಜೊತೆಗೆ ದೈಹಿಕ ಮಾನಸಿಕ ಅಸ್ವಸ್ಥತೆ, ಅತೃಪ್ತಿ, ಅಸಮಾಧಾನ, ಭಾವನತ್ಮಾಕ ಒತ್ತಡ ಮತ್ತು ದೈಹಿಕ ಶ್ರಮ ಕೂಡ ನಿದ್ರಾಹೀನತೆಯ ಸಾಥ್ ನೀಡುತ್ತದೆ. ಅಲ್ಲದೇ ರಾತ್ರಿಪಾಳಿಯ ಕೆಲ್ಸ ಕೂಡ ಈ ನಿದ್ರಾಹೀನತೆಗೆ ಮೂಲಕಾರಣವಾಗಿದೆ. ಒಂದುಕಾಲದಲ್ಲಿ ವಯಸ್ಸಾದವರಿಗೆ ಕಾಡುತ್ತಿದ್ದ ಈ ಕಾಯಿಲೆ ಇದೀಗ ಹೆಚ್ಚಾಗಿ ಯುವಜನಾಂಗಕ್ಕೂ ಕೂಡ ಕಾಡುತ್ತಿದೆ. ಇದು ನಿಜಕ್ಕೂ ಅಘಾತಕಾರಿ ವಿಷ್ಯ. ಇದಕ್ಕೆ ಮುಖ್ಯ ಕಾರಣವೆಂದ್ರೆ ಬದಲಾಗಿರುವ ಜೀವನಶೈಲಿ. ಧಮ್ ಮಾರೋ ಧಮ್ ಅಂತಾ ಸಿಕ್ಕಾಪಟ್ಟೆ ಸಿಗರೇಟಿನ ದಾಸರಾದವರಿಗೆ ಕುಡಿತದ ಚಟ ಹೊಂದಿರುವವರಿಗೆ ನಿದ್ರಾಹೀನತೆ ಮುಖ್ಯವಾಗಿ ಕಾಡುತ್ತೆ.

ನಿದ್ದೆಯನ್ನು ನಿರ್ಲಕ್ಷ್ಯಿಸಿದ್ರೆ ಆಗೋ ಅಪತ್ತು ಅಷ್ಟಿಷ್ಟಲ್ಲ. ನಿದ್ರಾ ಹೀನತೆಯೇ ಒಂದು ದಿನ ನಿಮ್ಮ ಜೀವಕ್ಕೆ ಕುತ್ತು ತರಬಹುದು. ನಮ್ಮ ಅಷ್ಟು ಶಕ್ತಿ, ಚೈತನ್ಯವನ್ನು ನುಂಗಿ ಹಾಕೋ ಗಟ್ಟಿ ತಾಕತ್ತು ಈ ನಿದ್ರಾಹೀನತೆಗಿದೆ. ನಿದ್ರಾಹೀನತೆಗೂ ಮಧುಮೇಹ ಕಾಯಿಲೆಗೂ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ನಿದ್ರಾಹೀನತೆಯಿಂದ ಹಾರ್ಮೋನಿನಲ್ಲಿ ಏರುಪೇರುಂಟಾಗುತ್ತೆ. ಅಲ್ಲದೇ ಮಹಿಳೆಯರಲ್ಲಿ ಪ್ರಮುಖವಾಗಿ ಋತುಚಕ್ರದಲ್ಲಿ ಏರುಪೇರು ಉಂಟಾಗುವುದು ನಿದ್ರಾಹೀನತೆಯ ಕಾರಣದಿಂದಲೇ ಅಂದ್ರೆ ನೀವು ನಂಬಲೇಬೇಕು. ಈ ಡೆಡ್ಲಿ ನಿದ್ರಾಹೀನತೆಯಿಂದ ಬಳಲುತ್ತಿರುವ ಹೆಚ್ಚಿನ ಜನ್ರಿಗೆ ಕ್ಯಾನ್ಸರ್, ಹೈಪರ್ ಟೈನ್ಶನ್, ಅಸ್ತಮಾದಂತ ಜೀವ ಹಿಂಡೋ ಕಾಯಿಲೆಗಳು ಕಾಣಿಸಿಕೊಳ್ಳುತ್ತೆ. ನೂರಾರು ಕಾಯಿಲೆಗಳಿಗೆ ಮೂಲಕಾರಣವಾಗಿರುವ ಈ ನಿದ್ರಾಹೀನತೆ ಕ್ರೀಯಾಶೀಲ ಮನುಷ್ಯನನ್ನು ಕೂಡ ನಿಷ್ಕ್ರೀಯನನ್ನಾಗಿ ಮಾಡಿಸಿಬಿಡುತ್ತೆ. ಮಾನಸಿಕ ಕಾಯಿಲೆಗೆ ಭದ್ರ ಬುನಾದಿ ಹಾಕಿಕೊಡುತ್ತೆ. ಉದ್ವಿಗ್ನತೆ, ಖಿನ್ನತೆ, ಮಾನಸಿಕ ತುಮುಲಗಳಿಗೆ ನಿದ್ರಾಹೀನತೆಯೇ ಮುಖ್ಯ ಕಾರಣವಾಗಿರುತ್ತೆ.

ನಿದ್ರಾಹೀನತೆಗೆ ಫುಲ್ ಬ್ರೇಕ್ ಹಾಕಿಲ್ಲವೆಂದ್ರೆ ನಿಮ್ಮ ಜೀವನ ಸಾವಿನ ತೂಗೂಯ್ಯಲೆಯಲ್ಲಿ ಜೋತಾಡುತ್ತೆ ಜೋಪಾನ. ಇದು ಭಯಾನಕ ಕಾಯಿಲೆ ಅಂತ ವೈದ್ಯಲೋಕ ಸ್ಪಷ್ಟಪಡಿಸಿದೆ. ಹಾಗಂತ ನೀವು ನಿದ್ರೆ ಮಾತ್ರೆಯನ್ನು ನಿರಂತರವಾಗಿ ಸೇವಿಸಿದ್ರೆ ನಿಮ್ಮ ಸಾವು ನಿಮ್ಮ ಕೈಯಲ್ಲಿರುತ್ತೆ ಹುಷಾರ್! ಯಾಕೆಂದ್ರೆ ಈ ನಿದ್ರೆ ಮಾತ್ರೆಗಳು ಒಂದು ಹೊತ್ತು ನಿಮಗೆ ನಿದ್ದೆ ತರಬಹುದು, ಆದ್ರೆ ಈ ಪುಟ್ಟ ಮಾತ್ರೆ ತರೋ ಅಡ್ಡಪರಿಣಾಮಗಳಿದೆಯಲ್ಲಾ ಅದು ನಿಮ್ಮ ಬದುಕನ್ನೆ ನುಂಗಿ ಹಾಕಬಹುದು. ನಿದ್ದೆ ಮಾತ್ರೆ ಮೆದುಳನ್ನು ನಿಷ್ಕ್ರೀಯಗೊಳಿಸೋ ಕೆಪಾಸಿಟಿ ಹೊಂದಿದೆ. ಇದ್ರಿಂದ ಅಜೀರ್ಣ, ವಾಂತಿಭೇದಿ, ಹೃದ್ರೋಗದಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ.

ನಿದ್ರಾ ದೇವತೆ ನಮ್ಮನ್ನು ಅವರಿಸಿಕೊಳ್ಳಬೇಕು ಅಂದ್ರೆ ಒಂದಿಷ್ಟು ಸುಲಭಮಾರ್ಗಗಳಿವೆ. ಹೊತ್ತುಗೊತ್ತಿಲ್ಲದ ಸಮಯದಲ್ಲಿ ಹಾಸಿಗೆಗೆ ಮೈಚಾಚುವುದರಿಂದ ನಮ್ಮ ದೇಹದಲ್ಲಿನ ದೈಹಿಕ ಗಡಿಯಾರದ ಸಮಯ ಕೂಡ ಏರಪೇರಾಗುತ್ತೆ. ನಿದ್ದೆಗೆ ನಿಗದಿತ ಸಮಯವಿರಬೇಕು, ವೇಳಾಪಟ್ಟಿಯಿರಬೇಕು. ರಜಾದಿನ ಅಂತ ಕುಂಭಕರ್ಣ ನಿದ್ದೆಗೆ ಜಾರೋದನ್ನ ಮೊದಲು ನಿಲ್ಲಿಸಬೇಕು. ಇನ್ನು ಕೆಲವರಲ್ಲಿ ಹಗಲುಕನಸುಕಾಣುವಂತೆ ಹಗಲು ಭರ್ಜರಿ ನಿದ್ದೆ ಹೊಡೆಯೋ ಅಭ್ಯಾಸ. ಇದ್ರಿಂದ ರಾತ್ರಿ ನಿದ್ದೆಗೆ ಹೊಡೆತಬೀಳುತ್ತೆ. ಹಗಲುವೇಳೆ ಕೇವಲ 20 ನಿಮಿಷಗಳಷ್ಟು ಕಾಲ ಮಾತ್ರ ನಿದ್ರಿಸಬೇಕು. ಇನ್ನೂ ಕೆಲವರು ರಾತ್ರಿ ವೇಳೆ ಭರ್ಜರಿ ಬ್ಯಾಟಿಂಗ್ ಮಾಡಿ ಗಡದ್ದಾಗಿ ತೇಗು ಬಿಡೋ ಕೆಟ್ಟ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದ್ರಿಂದ ಈ ನಿದ್ರಾಹೀನತೆ ತಾನಾಗೇ ಬಂದು ನಿಮ್ಮನ್ನು ಅಪ್ಪಿಕೊಳ್ಳುತ್ತೆ. ರಾತ್ರಿ ಹೊತ್ತು ಸಾತ್ವಿಕ ಆಹಾರ ಸೇವಿಸಿ. ಊಟವಾದ ತಕ್ಷಣ ಹಾಸಿಗೆಗೆ ಮೈಚಾಚುವ ಅಭ್ಯಾಸವನ್ನು ಕೂಡ ಬಿಟ್ಟುಬಿಡಬೇಕು. ಜೊತೆಗೆ ಮಲಗುವ ಮುನ್ನ ಸ್ನಾನ ಮಾಡಿದ್ರೆ ಆರಾಮ ನಿದ್ದೆ ನಿಮ್ಮದಾಗುತ್ತೆ. ನಿತ್ಯ ನಿಯಮಿತ ಧ್ಯಾನ ಯೋಗಗಳನ್ನು ಮಾಡುತ್ತಿದ್ರೆ ಸುಖನಿದ್ದೆ ನಿಮ್ಮನ್ನು ಅಪ್ಪಿಕೊಳ್ಳುತ್ತೆ. ಇನ್ನು ಸಂಗೀತರಸಿಕರು ನೀವಾಗಿದ್ರೆ ಮಲಗೋ ಮುನ್ನ ಸುಮಧುರ ಸಂಗೀತ ಕೇಳೋ ಅಭ್ಯಾಸ ಮಾಡಿಕೊಂಡ್ರೆ ಹಾಯಾಗಿ ನಿದ್ದೆ ಹೊಡಿಬಹುದು. ಅಂದಹಾಗೆ ಮಲಗಿದ ಕೂಡ್ಲೆ ನಿದ್ರೆ ನಿಮ್ಮ ತೆಕ್ಕೆಗೆ ಬರಬೇಕು ಅಂದ್ರೆ ಬೀ ಹ್ಯಾಪಿ ನೋ ಬಿ.ಪಿ….ಎನಿವೇ ಗುಡ್ ನೈಟ್..!

  •  ರಾ ಚಿಂತನ್

POPULAR  STORIES :

ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?

ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’

ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?

LEAVE A REPLY

Please enter your comment!
Please enter your name here