ಒಂದೇ ಒಂದು ಕಪ್ ಟೀ ಕೊಟ್ರೆ ಈ ಕುದುರೆ ಕೆಲಸಕ್ಕೆ ಹಾಜರ್!

Date:

ಈಗಿನ ಜಮಾನಕ್ಕೆ ಬೆಳಗಾಗೋವಾಗ ಬೆಡ್ ಕಾಫಿ ರೆಡಿಯಾಗಿರ್ಬೇಕು, ಇಲ್ಲಾಂದ್ರೆ ಅವರ ದಿನಚರಿನೂ ಪ್ರಾರಂಭ ಆಗಲ್ಲ. ಈ ರೀತಿ ದಿನಚರಿಯನ್ನು ಈಗ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಪಾಲಿಸುತ್ತಿವೆ. ಇಲ್ಲೊಂದು ಕುದುರೆ ಬೆಳಗ್ಗೆ ಎದ್ದು ಒಂದು ಕಪ್ ಟೀ ಕುಡಿಯೋ ಅಭ್ಯಾಸವನ್ನು ರೂಢಿಸಿಕೊಂಡಿದೆ. ಅದಕ್ಕೆ ತಿನ್ನೋಕೆ ಆಹಾರ ಕೊಡದೇ ಇದ್ದರೂ ಪರವಾಗಿಲ್ಲ. ಆದರೆ ಟೀ ಮಾತ್ರ ಬೇಕೇಬೇಕು.ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿರೋ ಕುದುರೆಯ ಹೆಸರು ಜೇಕ್. ಇದು ಲಂಡನ್ ಲಿವರ್ ಫೂಲ್ ನ ಮರ್ಸಿಸೈಡ್ ಪೊಲೀಸ್ ಮೌಂಟೆಡ್ ವಿಭಾಗದ ಕುದುರೆ.ಜೇಕ್ ಎರಡು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ದುಡಿಯುತ್ತಿದ್ದು, ಮುಂದಿನ ವರ್ಷ ನಿವೃತ್ತಿ ಹೊಂದಲಿದ್ದಾನೆ. ಜೇಕ್ ಗೆ ಬೆಳಗೆದ್ದು ಒಂದು ಕಪ್ ಟೀ ಕೊಟ್ಟರೆ ಸಾಕು ದಿನ ಪೂರ್ತಿ ಉತ್ಸಾಹದಿಂದ ಕೆಲಸ ಮಡುತ್ತದೆ. ಒಂದು ವೇಳೆ ಟೀ ಕೊಡದೇ ಇದ್ದರೆ ಜಪ್ಪಯ್ಯ ಅಂದ್ರು ಈತ ಕೆಲಸಕ್ಕೆ ಹಾಜಾರಾಗಲ್ಲ. ಅದರಲ್ಲೂ ಟೀ ಮಾಮೂಲಿಯಾಗಿರ್ಬಾದು. ಬದಲಾಗಿ ಕೆನೆರಹಿತ ಹಾಲು, ಎರಡು ಟೀ ಸ್ಪೂನ್ ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಚಹಾ ಮಾಡಿ ಕೊಟ್ಟರೆ ಅಂತೂ ಜೇಕ್ ಫುಲ್ ಖುಷ್.
ಇಷ್ಟಕ್ಕೂ ಜೇಕ್ ಟೀ ಕುಡಿಯೋ ಹವ್ಯಾಸಕ್ಕೆ ಕಾರಣ ಆತನ ಟ್ರೈನರ್. ಈತನಿಗೆ ಟ್ರೈನಿಂಗ್ ಕೊಡುತ್ತಿದ್ದ ಲಿಂಡ್ಸೆ ಗೇವನ್ ಅವರ ಟೀ ಕಪ್ ನಿಂದ ಒಂದು ಬಾರಿ ಟೀ ಕುಡಿದು ರುಚಿ ಹಿಡಿದಿದ್ದಾನೆ.

We have a new episode of #wintermorningwakeups featuring Jake. Jake refuses to get out of bed until he is brought a warm cup of @tetleyuk tea. Once he has drank this he is ready for the day. #StandTall #PHJake #NotStandingAtAll #BrewInBed #TeaTaster pic.twitter.com/iJXm32hlad
— Mer Pol Mounted (@MerPolMounted) November 20, 2019

ಆಮೇಲೆ ಜೇಕ್ ದಿನಂಪ್ರತಿ ಟೀ ಕುಡಿಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾನೆ. ಇದನ್ನು ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...