ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಹಿಟ್ಲರ್ ನಂತೆ ಆಳ್ವೀಕೆ ಮಾಡುತ್ತಿದ್ದಾರೆ. ಅವನಂತೆಯೇ ಸಾಯುತ್ತಾರೆ ಎಂದು ಬೆಳಗಾವಿ ಮಾಜಿ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಖಂಡಿಸಿ ನಗರದಲ್ಲಿ ಮುಸ್ಲಿಂ ಸಮುದಾಯ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಹಿಟ್ಲರ್ ಆಳ್ವಿಕೆಯನ್ನು ನಡೆಸುತ್ತಿದ್ದಾರೆ. ಇವರು ಮುಂದೆ ಹಿಟ್ಲರ್ ತರಹನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಕಾಲ ಬರಲಿದೆ ಎಂದಿದ್ದಾರೆ.
ಮೋದಿ ಹಾಗೂ ಶಾ ಸೇರಿಕೊಂಡು ಪೌರತ್ವದ ಕಾಯ್ದೆಯ ಮೂಲಕ ನಮ್ಮನ್ನು ಹತ್ತಿಕ್ಕಲು ಪ್ರಯತ್ನ ಪಡುತ್ತಿದ್ದಾರೆ. ನಾವು ಹಿಂದೂಸ್ಥಾನಿಗಳಲ್ಲ ಎಂದು ಹೇಳುವವರನ್ನೇ ಭಾರತದಿಂದ ಹೊರಗೆ ಹಾಕುತ್ತೇವೆ. ಈ ಪಿಶಾಚಿಗಳಿಂದ ನಮಗೆ ಸ್ವಾತಂತ್ರ್ಯ ಸಿಗುವವರೆಗೂ ನಾವು ಪ್ರತಿಭಟನೆ ಮುಂದುರೆಸುತ್ತೇವೆಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮೋದಿ ಮತ್ತು ಅಮಿತ್ ಶಾ ಹಿಟ್ಲರಂತೆಯೇ ಸಾಯ್ತಾರೆಂದ ಕಾಂಗ್ರೆಸ್ ನಾಯಕ!
Date: