ವಾಲ್ಮೀಕಿ ಸಮಾಜದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ ಇದಕ್ಕೆ ಪ್ರತಿಕ್ರಿಯೆ ನೀಡಿದ ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ವಾಲ್ಮೀಕಿ ಸಮಾಜವನ್ನು ಕೇವಲ ರಾಜಕೀಯಕ್ಕಾಗಿ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನವೇ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡುತ್ತೇವೆ ಎಂದಿದ್ದರು. ಆದರೆ ಇದೀಗ ಡಿಸಿಎಂ ಸ್ಥಾನ ನೀಡಿಲ್ಲ.
ಹೀಗಾಗಿ ಯಡಿಯೂರಪ್ಪ ವಿರುದ್ಧ ಅಂದೇ ಬೆಂಗಳೂರಿನಲ್ಲಿ ಮಾತನಾಡಿದ್ದೇನೆ. ಅಷ್ಟೆ ಅಲ್ಲ ಬಿ.ಎಸ್.ವೈ.ಗೆ ಸರಿಯಾಗಿ ಬೈದಿದ್ದೆೆ ಆದರೆ ಯಡಿಯೂರಪ್ಪ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ತಪ್ಪು ಎಂದು ನನ್ನ ಭಾವನೆ ಆದರೆ ಗೂ ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೆ ನೀಡುತ್ತಾರೆ ಎಂದು ನೋಡಬೇಕು ರಮೇಶ್ ಜಾರಕಿಹೊಳೆ ಹಾಗೂ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ ಎಂದು ಹೇಳಲಾಗ್ತಿದೆ ಅವರಲ್ಲಿ ಯಾರಿಗೆ ಬಂದರೂ ಸಹ ನನಗೆ ಖುಷಿ ಇದೆ ಎಂದು ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ .