ಆತ ತಪ್ಪು ಮಾಡಿದ್ದನೋ ಇಲ್ಲವೋ.. ಆದರೆ, ಅನ್ಯಾಯವಾಗಿ ಒಂದಿಷ್ಟು ಮಂದಿ ದುಷ್ಟರು ಆತನನ್ನು ಕೊಂದಿದ್ದಾರೆ. ಆತನ ಮರ್ಮಾಂಗವನ್ನು ಸುಟ್ಟು ಭೀಕರವಾಗಿ ಹತ್ಯೆಗೈದಿದ್ದಾರೆ.
ಹೌದು ಕಳ್ಳನೆಂದು ಆರೋಪಿಸಿ ದುಷ್ಕರ್ಮಿಗಳು ವ್ಯಕ್ತಿಯ ಮರ್ಮಾಂಗ ಸುಟ್ಟು ಕೊಲೆಗೈದ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.
ತಿರುವಲ್ಲಂ ಜಿಲ್ಲೆಯ ನಿವಾಸಿ ಅಜೀಶ್ ಮೃತ. ತಂಪನೂರು ಪ್ರದೇಶದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ ಪರ್ಸ್ ಕಳ್ಳತನವಾಗಿದ್ದು, ಅಲ್ಲಿದ್ದ 7 ಮಂದಿಯ ಗುಂಪೊಂದು ಆ ಕಳ್ಳತನವನ್ನು ಅಜೀಶ್ ಮೇಲೆ ಹೊರಸಿ, ಹಿಗ್ಗಾಮುಗ್ಗ ಥಳಿಸಿ, ಮರ್ಮಾಂಗ ಸುಟ್ಟಿದ್ದಾರೆ. ತೀವ್ರ ಹಲ್ಲೆಗೊಳಗಾದ ಅಜೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
https://youtu.be/EHKCarYeImU?t=9
ಅಜೀಶ್ ಕೊಲೆ ದೃಶ್ಯ ಪ್ರತ್ಯಕ್ಷದರ್ಶಿಗಳ ಮೊಬೈಲಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ತಲುಪುತ್ತಿದ್ದಂತೆ ಪೊಲೀಸರು ತನಿಖೆ ಚುರುಗೊಳಿಸಿ ನಾಸೀರ್, ದಿನೇಶ್ ವರ್ಗಿಸ್, ಅರ್ಜುನ್, ಸಜನ್ ಮತ್ತು ರಾಬಿನ್ ಎಂಬ ಐವರನ್ನು ಅರೆಸ್ಟ್ ಮಾಡಲಾಗಿದೆ.