No menu items!
13.3 C
Munich
Thursday, April 30, 2026

ಯಾಮಾರಿಸ್ತಾರೆ ಹುಷಾರ್ : ಶೈನ್ ವೆಬ್​​ಸೈಟ್​ ಹೆಸ್ರಲ್ಲಿ ಯುವತಿಗೆ ಬರೋಬ್ಬರಿ 1,97,000 ರೂ ವಂಚಿಸಿದ ಭೂಪ!

Must read

ಇತ್ತೀಚೆಗೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಬಹು ದೊಡ್ಡ ಸಾಹಸವೇ ಸರಿ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೂ ಕೆಲಸ ಸಿಗುವುದು ಕಷ್ಟ. ನಿರುದ್ಯೋಗಿಗಳ ಈ ಅಳಲನ್ನೇ ಬಂಡವಾಳವಾಗಿಸಿಕೊಂಡು ಕೆಲವರು ಲಕ್ಷಾಂತರ ರೂ ವಂಚಿಸುತ್ತಿದ್ದಾರೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಇಂತಹದ್ದೊಂದು ವಂಚನೆ ನಡೆದಿದೆ. ಶೈನ್​.ಕಾಮ್ ಎಂ ಹೆಸರಿನ ಆನ್​ಲೈನ್​​ ಜಾಬ್​​ಸೈಟ್​ ಮೂಲಕ ಯುವತಿ ವಂಚನೆಗೆ ಒಳಗಾಗಿದ್ದಾರೆ. ಉದ್ಯೋಗ ಹುಡುಕುತ್ತಿದ್ದ ಲಕ್ಷ್ಮೀ ಎಂಬಾಕೆ ಮೋಸ ಹೋದವರು. ಶೈನ್.ಕಾಮ್ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಪ್ರೊಫೈಲ್​​, ರೆಸ್ಯೂಮ್ ಅಪ್​ಲೋಡ್ ಇತ್ಯಾದಿ ಹೆಸರಲ್ಲಿ ಹಂತ ಹಂತವಾಗಿ ಯುವತಿಯಿಂದ 1 ಲಕ್ಷದ 97 ಸಾವಿರ ರೂ ಹಣ ಪಡೆದಿದ್ದಾನೆ. ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕಂಗಾಲಾದ ಯುವತಿ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article