ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂಟರ್ನ್ ಹೊಡೆದಿದ್ದಾರೆ. ಇಷ್ಟು ದಿನ ತಾನು ರಾಜೀನಾಮೆಯನ್ನು ಹಿಂಪಡೆಯಲ್ಲ ಎಂದು ಹೇಳ್ತಿದ್ದ ಸಿದ್ದರಾಮಯ್ಯ ಈಗ ಮನಸ್ಸು ಬದಲಿಸಿದ್ದಾರೆ. ರಾಜೀನಾಮೆ ಹಿಂಪಡೆದು ಸಿಎಲ್ಪಿ ನಾಯಕ ಸ್ಥಾನ ಮತ್ತು ವಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರೆಯುವ ಸೂಚನೆ ನೀಡಿದ್ದಾರೆ.
ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿ ಎಲ್ ಪಿ ನಾಯಕ ಸ್ಥಾನಕ್ಕೆ ಕೊಟ್ಟಿರುವ ರಾಜೀನಾಮೆಯನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳುತ್ತಿದ್ದ ಅವರು ದೆಹಲಿ ತಲುಪಿದ ಮೇಲೆ ಯೂಟರ್ನ್ ಹೊಡೆದಿದ್ದಾರೆ. ಹೈಕಮಾಂಡ್ ಸೂಚಿಸಿದರೆ ವಿಪಕ್ಷ ಮತ್ತು ಸಿ ಎಲ್ ಪಿಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ಹಿಂಪಡೆದು ಜವಬ್ದಾರಿಯಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೊನೆಯ ಅಭಿಪ್ರಾಯ ತಿಳಿಸುವಂತೆ ಮಧುಸೂದನ್ ಮಿಸ್ತಿç ಕರೆಮಾಡಿದ್ದು, ೧೦ ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆಗ ಮಿಸ್ತಿç ೧೦ ದಿನಗಳಲ್ಲ ೧ ಗಂಟೆಯಲ್ಲಿ ಅಭಿಪ್ರಾಯ ತಿಳಿಸಿ ಎಂದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ನಂತರ ನಿರ್ಧಾರ ತಿಳಿಸುತ್ತೇನೆಂದಿದ್ದಾರೆ.
ಇಷ್ಟು ದಿನ ಹೀಗೆ ಹೇಳ್ತಿದ್ದ ಸಿದ್ದರಾಮಯ್ಯ ಡೆಲ್ಲಿಗೆ ಹೋಗ್ತಿದ್ದಂತೆ ಯೂಟರ್ನ್!
Date: