ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಪಾಕಿಸ್ತಾನದ ಜಾಲವೊಂದನ್ನು ಭೇದಿಸಿದ್ದಾರೆ. ಈ ಸಂಬಂಧ ಭಾರತೀಯ ನೌಕಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಆಂಧ್ರ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಗುಪ್ತಚರ ಸಂಸ್ಥೆ, ನೌಕಾಪಡೆ ಗುಪ್ತಚರ ಸಂಸ್ಥೆಯ ಸಹಾಯದಿಂದ ಆಂಧ್ರ ಪೊಲೀಸರ ಗುಪ್ತಚರ ದಳ `ಆಪರೇಷನ್ ಡಾಲ್ಫಿನ್ಸ್ ನೋಸ್’ ರಹಸ್ಯ ಕಾರ್ಯಚರಣೆ ನಡೆಸಿದ್ದು, ಇದರಿಂದ ಭಾರತದಲ್ಲಿ ಪಾಕ್ ಗೂಢಚಾರಿಕೆ ಜಾಲವಿರುವುದು ಬೆಳಕಿಗೆ ಬಂದಿದೆ. ದೇಶದ ವಿವಿಧ ಭಾಗಗಳಿಂದ ಏಳು ನೌಕಪಡೆ ಸಿಬ್ಬಂದಿ ಮತ್ತು ಒಬ್ಬ ಹವಾಲಾ ಆಪರೇಟರನ್ನು ಬಂಧಿಸಲಾಗಿದೆ. ಮತ್ತಷ್ಟು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಂಧಿತರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಪಾಕ್ ಗೂಢಚಾರಿಕೆ ಜಾಲ ಪತ್ತೆ!
Date: