ನ್ಯೂ ಇಯರ್ ಪಾರ್ಟಿಗೆ ಸಂಗಾತಿ ಹುಡುಕಾಟದಲ್ಲಿರೋರಿಗೆ ಮಾತ್ರ!

Date:

2019ಗೆ ಗುಡ್​ಬೈ ಹೇಳಿ.. 2020ಗೆ ವೆಲ್ಕಮ್​​ ಮಾಡೋ ಟೈಮ್ ಬಂದೇ ಬಿಡ್ತು. 2019ರಲ್ಲಿ ಒಂದಿಷ್ಟು ಖುಷಿ, ನೋವು. ಗೆಲುವು, ಸೋಲು ಎಲ್ಲಾ ಕಂಡಿದ್ದೀವಿ. ಪಾಸ್ಟ್ ಈಸ್ ಪಾಸ್ಟ್ ಬಿಟ್ಟಾಕಿ.. ಈಗ ಬರುವ ವರ್ಷವನ್ನು ಪ್ರೀತಿಯಿಂದ ಬರಮಾಡಿ ಕೊಳ್ಳೋ ಟೈಮು. ಫ್ರೆಂಡ್ಸ್ ಜೊತೆ ಎಣ್ಣೆ ಹೊಡೆದು ನ್ಯೂ ಇಯರ್ ವೆಲ್ಕಮ್ ಮಾಡೋ ಮಂದಿ ಒಂದಿಷ್ಟು ಇದ್ರೆ.. ಸಂಗಾತಿ ಜೊತೆ ಹೊಸ ವರ್ಷವನ್ನು ಸ್ವಾಗತಿಸೋ ಜನ ಮತ್ತೊಂದಿಷ್ಟು. ಇನ್ನೊಂದಿಷ್ಟು ಮಂದಿಗೆ ಸಂಗಾತಿ ಜೊತೆ ಡೇಟಿಂಗ್ ಮಾಡ್ಬೇಕು, ನ್ಯೂ ಇಯರ್ ಸೆಲೆಬ್ರೇಟ್ ಮಾಡ್ಬೇಕು ಅನ್ನೋ ಆಸೆ ಇರುತ್ತೆ ಬಟ್. ಸಂಗಾತಿ ಇಲ್ವಲ್ಲಾ ಅನ್ನೋ ಕೊರಗು! ನೀವು ತಕ್ಷಣಕ್ಕೆ ಸಂಗಾತಿಯ ಹುಡುಕಾಟದಲ್ಲಿದ್ರೆ ನಿಮಗಿದೋ ಇಲ್ಲಿದೆ ಒಂದು ಸೂಪರ್ ಆಯ್ಕೆ.
ನೀವು ಸಿಂಗಲ್ಲಾಗಿದ್ದೀರಾ? ನಿಮಗಾಗಿಯೇ ಇರೋದು ರೀ… ಸ್ಪೀಡ್ ಡೇಟಿಂಗ್ ಕಾನ್ಸೆಪ್ಟ್! ಸ್ಪೀಡ್​ ಡೇಟಿಂಗಲ್ಲಿ ಸಂಗಾತಿಗಾಗಿ ಸರ್ಚ್​ ಮಾಡ್ತಿರೋರು ಮೊದಲು ರಿಜಿಸ್ಟರ್ ಮಾಡಿಕೊಳ್ಬೇಕು. ಇದಕ್ಕಾಗಿಯೇ ಸಾಕಷ್ಟು ಸಂಸ್ಥೆಗಳು ಕಾರ್ಯ ನಿರ್ವಹಿಸ್ತಿವೆ. ಇವುಗಳ ವೆಬ್​ಸೈಟ್ ಅಥವಾ ಆ್ಯಪ್​ಗೆ ಹೋಗಿ ನೀವು ರಿಜಿಸ್ಟರ್ ಆಗ್ಬಹುದು. ಹೀಗೆ ರಿಜಿಸ್ಟರ್ ಮಾಡ್ಕೊಂಡ ಯುವಕ – ಯುವತಿಯರನ್ನು ಮೀಟ್ ಮಾಡೋಕೆ ಒಂದು ಡೇಟ್ ಮತ್ತು ಪ್ಲೇಸ್​ ನಿಗದಿ ಮಾಡಲಾಗುತ್ತೆ. ಒಂಟಿ ಯುವಕ – ಯುವತಿಯರಿಗೆ ಪ್ರತಿಯೊಬ್ಬರಿಗೂ ಒಂದಿಷ್ಟು ಹೊತ್ತು ಮಾತುಕತೆಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತೆ. ಪರಸ್ಪರ ಮಾತಾಡಿ, ವಿಚಾರ ವಿನಿಮಯ ಮಾಡ್ಕೊಂಡು ಯಾರು ಯಾರಿಗೆ ಇಷ್ಟ ಆಗ್ತಾರೋ ಅವರಿಗೆ ಸ್ಪೀಡ್ ಡೇಟಿಂಗ್​ಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತೆ.


ಹೀಗೆ ನ್ಯೂ ಇಯರ್​ನಲ್ಲಿ ಸ್ಪೀಡ್​ ಡೇಟಿಂಗ್​ಗೆ ಖುಷಿ ಕೊಟ್ರೆ.. ಆ ಸಂಗಾತಿ ಜೊತೆ ಲೈಫ್ ಲಾಂಗ್ ಇರ್ಬೇಕು ಅಂತ ಅನಿಸಿದ್ರೆ, ಪರಸ್ಪರ ಒಪ್ಪಿ ರಿಲೇಷನ್ ಶಿಪ್ ಕಂಟಿನ್ಯೂ ಮಾಡ್ಬಹುದು. ಇಲ್ದಿದ್ರೆ ಮೊದಲ ಡೇಟಿಂಗಲ್ಲೇ ಬ್ರೇಕಪ್ ಆಗ್ಬಹುದು.. ಅವೆಲ್ಲಾ ಜೋಡಿ ಇಷ್ಟ -ಕಷ್ಟ. ಇಲ್ಲಿ ಯಾವ್ದೇ ರಿಸ್ಕ್ ಇರಲ್ಲ ಎಂದು ಹೇಳಲಾಗುತ್ತಿದೆ. ನೀವು ಸ್ಪೀಡ್ ಡೇಟಿಂಗ್​ಗೆ ಹೋಗೋ ಮೊದಲು ನಿಮ್ಮ ಡೀಟೆಲ್ಸ್​, ಕಾಂಟೆಕ್ಟ್​ ನಂಬರ್ ಎಲ್ಲೂ ಶೇರ್ ಮಾಡಲ್ಲ. ಯಾರ ಮೇಲೆ ಯಾರಿಗೆ ಮನಸ್ಸಾಗುತ್ತೋ ಅವರನ್ನು ಒಂದು ಮಾಡ್ತಾರಷ್ಟೇ ಎಂದು ಸೋಶಿಯಲ್ ಮೀಡಿಯಾದಲ್ಲಿ ವರದಿಗಳಾಗ್ತಿವೆ.
(ವಿಶೇಷ ಸೂಚನೆ : ಬಹುಕಾಲದಿಂದ ಜೊತೆಗಿರುವವರನ್ನು ನಂಬುವುದೇ ಕಷ್ಟವಾಗಿರುವ ಕಾಲದಲ್ಲಿ ಸ್ಪೀಡ್ ಡೇಟಿಂಗ್, ಅದು ಇದು ಅಂತ ಪರಿಚಯ ಆಗೋರನ್ನು ನಂಬಲು ಸಾಧ್ಯವೇ. ಸೋ ಇಂತಹದ್ದೆಲ್ಲಾ‌ ನಂಬ ಬೇಡಿ..ಡೇಟಿಂಗ್ ಗೀಟಿಂಗ್ ಎಂಬ ಕ್ಷಣದ ಖುಷಿಗೆ ಜೀವನ ಹಾಳ್ಮಾಡ್ಕೋಬೇಡಿ)

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....